ಪವರ್‌ ಸ್ಟಾರ್‌ಗೆ ಎದುರಾಯ್ತು ಸಂಕಷ್ಟ……ಪವನ್‌ ಕಲ್ಯಾಣ್ ವಿರುದ್ದ ದಾಖಲಾಯ್ತು FIR !!

ಹೈದರಾಬಾದ್‌ : ಟಾಲಿವುಡ್‌ನ ಖ್ಯಾತ ನಟ, ಪವರ್‌ ಸ್ಟಾರ್‌ ಎಂದೇ ಬಿರುದು ಪಡೆದಿರುವ ಜನಸೇನಾ ನಾಯಕ ಪವನ್‌ ಕಲ್ಯಾಣ್‌ಗೆ ಸಂಕಷ್ಟ ಎದುರಾಗಿದೆ. ಮಾಧ್ಯಮವನ್ನು ನಿಂದಿಸಿದ ಆರೋಪದಡಿ ಪವನ್‌ ಕಲ್ಯಾಣ್ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಾಗಿ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಪವನ್ ಕಲ್ಯಾಣ್‌, ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಫೋನ್‌ ಮಾಡಿ ನಿಂದಿಸಿದ್ದರು ಎಂದು ತಿಳಿದುಬಂದಿದ್ದು, ಈ ಬಗ್ಗೆ ಏಪ್ರಿಲ್‌ 21ರಂದು ಪತ್ರಕರ್ತರ ಸಂಘ ಪವನ್ ವಿರುದ್ಧ ಹೈದರಾಬ್ದ್‌ನ ಬಂಜಾರಾ ಹಿಲ್ಸ್‌ ಪೊಲೀಸ್ ಠಾಣೆಯಲ್ಲಿ ದೂು ದಾಖಲಿಸಿತ್ತು. ಪವನ್ ಕಲ್ಯಾಣ್ ಮಾಧ್ಯಮಗಳ ವಿರುದ್ಧ ಮಾಡಿದ್ದ ಕಮೆಂಟ್‌ಗಳು, ಖಾಸಗಿ ಟಿವಿ ವಾಹಿನಿಯ ಸಿಇಒ, ಉದ್ಯೋಗಿಗಳನ್ನು ನಿಂದಿಸಿದ ಆಡಿಯೋಗಳನ್ನು ಸಾಕ್ಷಿಯಾಗಿಟ್ಟುಕೊಂಡು ಕೇಸ್‌ ದಾಖಲಿಸಿದ್ದಾರೆ. ಈ ಎಲ್ಲಾ ಸಾಕ್ಷಿಗಳನ್ನು ಪರಿಶೀಲನೆ ನಡೆಸಿರುವ ಪೊಲೀಸರು ಪವನ್ ಕಲ್ಯಾಣ್ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com