ಕೊಹ್ಲಿಗೆ ಖೇಲ್ ರತ್ನ, ದ್ರಾವಿಡ್‍ಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲು BCCI ಶಿಫಾರಸು

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಗೌರವ ಪ್ರಶಸ್ತಿ ನೀಡುವಂತೆ ಭಾರತ ಸರ್ಕಾರಕ್ಕೆ ಬುಧವಾರ ಬಿಸಿಸಿಐ ಶಿಫಾರಸು ಮಾಡಿದೆ. ಈ ಹಿಂದೆ 2016 ರಲ್ಲಿ ಖೇಲ್ ರತ್ನ ಪ್ರಶಸ್ತಿಗಾಗಿ ವಿರಾಟ್ ಹೆಸರನ್ನು ಬಿಸಿಸಿಐ ಸೂಚಿಸಿತ್ತು. ಆದರೆ ಆ ವರ್ಷ ಪಿ.ವಿ ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಅವರಿಗೆ ಖೇಲ್ ರತ್ನ ಗೌರವ ನೀಡಲಾಗಿತ್ತು.

ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಅವರಿಗೆ ಧ್ಯಾನ್ ಚಂದ್ ಜೀವಮಾನ ಸಾಧನೆಯ ಗೌರವ ನೀಡಲು ಬಿಸಿಸಿಐ ಶಿಫಾರಸು ಮಾಡಿದೆ. ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನ ಪರಿಗಣಿಸಿ ಸುನಿಲ್ ಗವಾಸ್ಕರ್ ಹೆಸರನ್ನು ಸೂಚಿಸಲಾಗಿದೆ.

‘ದಿ ವಾಲ್’ ಹಾಗೂ ‘ಮಿಸ್ಟರ್ ಡಿಪೆಂಡೆಬಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲು ಶಿಫಾರಸು ಮಾಡಿದೆ. ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಇದೇ ವರ್ಷ ಭಾರತದ ಕಿರಿಯರ ತಂಡ ನ್ಯೂಜಿಲೆಂಡ್ ನಲ್ಲಿ ಅಂಡರ್-19 ವಿಶ್ವಕಪ್ ಜಯಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com