ಮೋದಿ ಪರ ಕಾರ್ಯಕರ್ತರ ಘೋಷಣೆ : ಮುಜುಗರಕ್ಕೀಡಾದ ರಾಹುಲ್ ಗಾಂಧಿ

ಅಂಕೋಲಾ : ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಹೊನ್ನಾವರದಲ್ಲಿ ರೋಡ್ ಶೋ ನಡೆಸಿದ ರಾಹುಲ್, ಶರಾವತಿ ಸರ್ಕಲ್ ಬಳಿ ಭಾಷಣ ಮಾಡುವಾಗ,ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಪರವಾಗಿ ಘೋಷಣೆ ಕೂಗಿದ್ದಾರೆ. ‘ಮೋದಿ, ಮೋದಿ’ ಘೋಷಣೆ ಮುಗಿಲು ಮುಟ್ಟಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ‘ರಾಹುಲ್ ರಾಹುಲ್’ ಎಂದು ಘೋಷಣೆ ಕೂಗಿದ್ದಾರೆ.

ಮೋದಿ ಹಾಗೂ ರಾಹುಲ್‌ ಅಭಿಮಾನಿಗಳ ಘೋಷಣೆಯಿಂದಾಗಿ ರಾಹುಲ್‌ ಗೆ ಭಾಷಣ ಮಾಡಲು ಸಾಧ್ಯವಾಗದೆ ಅರ್ಧಕ್ಕೇ ಭಾಷಣವನ್ನು ಮೊಟಕುಗೊಳಿಸಿ ರೋಡ್‌ ಶೋ ಮುಂದುವರಿಸಿರುವ ಸಂಗತಿ ನಡೆದಿದೆ. ಅಲ್ಲದೆ ರಾಹುಲ್ ರೋಡ್ ಶೋ ಹಿನ್ನಲೆಯಲ್ಲಿ ಕಾರವಾರದಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಹ  ಪರಿಸ್ಥಿತಿ ಏರ್ಪಟ್ಟಿತ್ತು.

Leave a Reply

Your email address will not be published.

Social Media Auto Publish Powered By : XYZScripts.com