ವರುಣಾದಲ್ಲಿ BJP v/s BJP:ಕಮಲ ನಾಯಕರ ಸೋಲಿಸಲು ಕಾರ್ಯಕರ್ತರೇ ತೋಡಿದ್ದಾರೆ ಖೆಡ್ಡಾ

ಮೈಸೂರು : ಬಿಜೆಪಿ ಟಿಕೆಟ್ ಘೋಷಿಸುವ ಮುನ್ನ ವರುಣಾದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಬಿಜೆಪಿಯಿಂದ ವರುಣಾದಲ್ಲಿ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ವಿಜಯೇಂದ್ರ ಬದಲಿಗೆ ಬಸವರಾಜ್‌  ಅವರಿಗೆ ಟಿಕೆಟ್‌ ನೀಡಿದ್ದು, ಇದರಿಂದ ಕಾರ್ಯಕರ್ತರು ಸಿಟ್ಟಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ವರುಣಾದಲ್ಲಿ ನೋಟಾ ಅಭಿಯಾನ ಆರಂಭವಾಗಿದ್ದು, ಫೇಸ್‌ಬುಕ್‌, ವಾಟ್ಸಾಪ್‌ ಸೇರಿದಂತೆ ಎಲ್ಲೆಡೆ ಈ ಅಭಿಯಾನ ವೈರಲ್ ಆಗುತ್ತಿದೆ. ನೋಟಾ ಚಲಾವಣೆ ಮಾಡುವಂತೆ ಎಲ್ಲೆಡೆ ಕರಪತ್ರಗಳನ್ನು ಹಂಚಲಾಗುತ್ತಿದ್ದು, ಕರಪತ್ರದಲ್ಲಿ ಬಿಜೆಪಿಯ ಕಮಲ ಉಲ್ಟಾ ಆಗಿದೆ. ಕರಪತ್ರದಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್, ಆರ್‌ಎಸ್‌ಎಸ್ ಮುಖಂಡ ಸಂತೋಷ್ ಹೆಸರು ಉಲ್ಲೇಖಿಸಿದ್ದು,  ಅಭ್ಯರ್ಥಿ ಬದಲಾವಣೆಗಾಗಿ ನೀವು ಎಷ್ಟು ತೆಗೆದುಕೊಂಡಿದ್ದೀರಿ? ಎಂದು  ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ  ನಿಮ್ಮ ಗರ್ವಭಂಗಕ್ಕಾಗಿ ಈ ಬಾರಿ ನೋಟಾ ಚಲಾವಣೆ ಮಾಡುವುದಾಗಿ ಹೇಳಿದ್ದು, ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ನಮಗೆ ಮತದಾನದಿಂದ ಸಿಕ್ಕಿದೆ. ವರುಣಾ‌ ಕ್ಷೇತ್ರದಲ್ಲಿ ಆಗಿರುವ ಈ ಬೆಳವಣಿಗೆ 9 ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ.ಈ ಕಾರಣಕ್ಕಾಗಿ ಮೈಸೂರಿನ ವರುಣಾದಲ್ಲಿ ಈ ಬಾರಿ ನೋಟಾ ಚಲಾವಣೆ ಮಾಡುತ್ತೇವೆ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com