ಜಮೀರ್‌ ಅಹ್ಮದ್‌ ನನ್ನ ದೇವರು, ಅವರನ್ನು ಬಿಟ್ಟು ಒಂದು ದಿನಾನೂ ಇರಲ್ಲ : ಚೆಲುವರಾಯಸ್ವಾಮಿ

ಮದ್ದೂರು :  ಅಂಬರೀಶ್ ರಾಜಕೀಯ ನಿವೃತ್ತಿ ಘೋಷಿಸಿಲ್ಲ. ಇದೆಲ್ಲಾ ಮಾದ್ಯಮಗಳ ಸೃಷ್ಠಿಯಷ್ಟೇ. ವೈಯುಕ್ತಿಕ ಕಾರಣಗಳಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮದ್ದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬರೀಶ್ ಅವರನ್ನು ಪ್ರಚಾರಕ್ಕೆ ಕರೆತರುವ ಬಗ್ಗೆ ಅವರ ಬೆಂಬಲಿಗರು, ಮಂಡ್ಯ ಮುಖಂಡರು ಮಾತನಾಡಿದ್ದಾರೆ. ಇನ್ನೆರಡು ಮೂರು ದಿನಗಳ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಇದೇ ವೇಳೆ  ಜಮೀರ್ ಅನಾಗರೀಕ ಎಂಬ ಹೆಚ್ಡಿಕೆ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ಜಮೀರ್ ನನ್ನ ದೇವರು, ಜಮೀರ್ ಬಿಟ್ಟು ಒಂದು ದಿನ ಕೂಡ ಇರಲ್ಲ ಎಂದು ಹೇಳಿದ ದಿನಗಳು ಇವೆ. ಜಮೀರ್ ಅಹ್ಮದ್ ನಿಂದ ಏನೆಲ್ಲಾ ಅನುಕೂಲ‌ ಪಡೆಯಬೇಕಿತ್ತೋ ಪಡೆದಿದ್ದಾರೆ. ಈಗ ಅನಾಗರೀಕ, ಭಿಕ್ಷುಕ ಅಂತ ಏನು ಬೇಕಾದರೂ‌ ಮಾತನಾಡ್ತಾರೆ. ಅವರು ಹುಟ್ಟುತ್ತಲೇ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದಾರೆ. ನಾವೆಲ್ಲಾ ಭಿಕ್ಷುಕರು ಅನಾಗರೀಕರು ಅಂದರೆ ತಪ್ಪಲ್ಲಾ ಬಿಡಿ ಎಂದಿದ್ದಾರೆ. ಅಲ್ಲದೆ, ಕುಮಾರಸ್ವಾಮಿ ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ತಮ್ಮ ಒಡೆತನದ ಸುದ್ದಿ ವಾಹಿನಿ‌ ಮೂಲಕ ಬಾಯಿಗೆ ಬಂದಂತೆ ಮಾತನಾಡಬಾರದು. ಮಾಜಿ ಸಿಎಂ ಆದವರು, ಮಾಜಿ ಪ್ರಧಾನಿ ಕುಟುಂಬದಿಂದ ಬಂದವರು ಮಾತಿನ‌ ಮೇಲೆ ನಿಗಾ ಇಟ್ಟುಕೊಂಡಿರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com