ಗಾಂಧೀಜಿ ಹುಟ್ಟಿದ ಪುಣ್ಯಭೂಮಿ ಭಾರತದ ಬಗ್ಗೆ ಮಾತಾಡಿದ ಮಲ್ಲಿಕಾ ಶೆರಾವತ್‌…ಹೇಳಿದ್ದೇನು…?

ಮುಂಬೈ : ದೇಶದಲ್ಲಿ ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ಬಾಲಿವುಡ್‌ ನಟಿ ಮಲ್ಲಿಕಾ ಶೆರಾವತ್‌ ಕಳವಳ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿ ಅವರು ಹುಟ್ಟಿರುವ ನಾಡಲ್ಲಿ ಇಂದು ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಇದು ನಿಜಕ್ಕೂ ಆಘಾತಕಾರಿ ಎಂದಿದ್ದಾರೆ.
ಗುರುವಾರ ದಾಸ್‌ ದೇವ್‌ ಸಿನಿಮಾದ ವಿಶೇಷ ಪ್ರದರ್ಶನದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ ,ಲೈಂಗಿಕ ದೌರ್ಜನ್ಯಗಳು ನಾಚಿಕೆಗೇಡಿನ ಸಂಗತಿಯಾಗಿದೆ.ಗಾಂಧೀಜಿ ಹುಟ್ಟಿದಂತಹ ಪುಣ್ಯಭೂಮಿ ಈಗ ಅತ್ಯಾಚಾರಿಗಳ ನೆಲೆಯಾಗುತ್ತಿದೆ. ಮಾಧ್ಯಮಗಳು ಇಂತಹ ಪ್ರಕರಣಗಳನ್ನು ಬೆಳಕಿಗೆ ತರುತ್ತಿದ್ದು, ಜನ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ಮಾಧ್ಯಮಗಳು ದೇಶದಲ್ಲಿ ನಿರ್ಭೀತಿಯಿಂದ ಕೆಲಸ ಮಾಡುತ್ತಿರುವುದಕ್ಕೆ ಇಂತಹ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಅಲ್ಲದೆ ಪ್ರಧಾನಿ ಮೋದಿ ಸರ್ಕಾರ ಇತ್ತೀಚೆಗಷ್ಟೇ ಅತ್ಯಾಚಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಂಡಿದ್ದು, ನಿಜಕ್ಕೂ ಇದು ಹೆಮ್ಮೆಯ ಸಂಗತಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com