ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಂತೆ ಕನ್ಹಯ್ಯಾ ಕುಮಾರ್

ದೆಹಲಿ : ದೆಹಲಿ ಜೆಎನ್‌ಯು ವಿವಿಯ ವಿದ್ಯಾರ್ಥಿ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಹಾಗೂ ಮಾಜಿ ಉಪಾಧ್ಯಕ್ಷೆ ಶೆಹಲಾ ರಶೀದ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಕನ್ಹಯ್ಯಾ ಕುಮಾರ್‌, ಬಿಜೆಪಿಯನ್ನು ಮಣಿಸಲು ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಕೈ ಜೋಡಿಸಿ ತಮ್ಮನ್ನು ಲೋಕಸಭಾ ಅಭ್ಯರ್ಥಿಯನ್ನಾಗಿಸಿದರೆ ಸ್ಪರ್ಧಿಸಲು ನಾವು ಸಿದ್ದ ಎಂದಿದ್ದಾರೆ. ಅಲ್ಲದೆ ಕೋಮುವಾದಿ ಬಿಜೆಪಿಯನ್ನು ಎಲ್ಲಾ ಎಡಪಕ್ಷಗಳೂ ಬಲವಾಗಿ ವಿರೋಧಿಸುವಂತೆ ಕರೆ ನೀಡಿದ್ದಾರೆ.

ಕನ್ಹಯ್ಯಾ ಅವರ ತವರಾದ ಬೇಗುಸರಾಯ್‌ನಿಂದಲೇ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದು, ಈ ಜಿಲ್ಲೆಯಲ್ಲಿ ಹಿಂದಿನಿಂದಲೂ ಸಿಪಿಐ ಬಲಿಷ್ಠವಾಗಿದೆ.  ಅಲ್ಲದೆ ನಮ್ಮ ಕುಟುಂಬಸ್ಥರೂ ಸಿಪಿಐಗೆ ಬೆಂಬಲ ನೀಡುತ್ತಾರೆ. ಆದರೆ ಕಳೆದ ಎರಡು ಅವಧಿಯಿಂದ ಬಿಜೆಪಿ ಶಾಸಕರು ಆಯ್ಕೆಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಈಗ ಬಿಜೆಪಿಯನ್ನು ಕೆಳಗಿಳಿಸಿ ಜನೋಪಕಾರಿ ವ್ಯಕ್ತಿಯನ್ನು ಆರಿಸಬೇಕು ಎಂದಿದ್ದಾರೆ.

ಇದೇ ವೇಳೆ ಮತ್ತೊಬ್ಬ ನಾಯಕಿ ಶೆಹಲಾ ರಶೀದ್‌ ಸಹ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದು, ತಾನು ಶ್ರೀನಗರದವಳಾಗಿದ್ದರೂ ಉತ್ತರ ಪ್ರದೇಶದಿಂದ ಕಣಕ್ಕಿಳಿಯುವ  ಬಯಕೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com