ಗೂಗಲ್ ವಿರುದ್ಧವೇ ಗರಂ ಆದ ರಮ್ಯಾ : ಅಷ್ಟಕ್ಕೂ ಸಿಟ್ಟಾಗಲು ಕಾರಣವೇನು ?
ಬೆಂಗಳೂರು : ಭಾರತದ ಮೊದಲ ಪ್ರಧಾನಿ ನೆಹರೂ ಎನ್ನುವ ಹೆಸರನ್ನು ಸೂಚಿಸುವ ಬದಲಿಗೆ ಪ್ರಧಾನಿ ಮೋದಿ ಅವರ ಹೆಸರನ್ನು ತೋರಿಸಿದ್ದ ಖ್ಯಾತ ಸರ್ಚ್ ಇಂಜಿನ್ ಗೂಗಲ್ ವಿರುದ್ಧ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ರಮ್ಯಾ ಕೆಂಡ ಕಾರಿದ್ದಾರೆ.
ಮಾಜಿ ಸಂಸದೆ ರಮ್ಯಾ ಗೂಗಲ್ ವಿರುದ್ದವೇ ಹರಿಹಾಯ್ದಿದ್ದು, ಗೂಗಲ್ ಸರ್ಚ್ ಇಂಜಿನ್ನಲ್ಲಿ ಭಾರತದ ಪ್ರಥಮ ಪ್ರಧಾನಿ ಎಂದು ಟೈಪ್ ಮಾಡಿ ಸರ್ಚ್ ನೀಡಿದ್ದಾರೆ. ಈ ವೇಳೆ ನೆಹರು ಅವರ ಬದಲಿಗೆ ಮೋದಿ ಅವರ ಫೋಟೋ ಬಂದಿದೆ. ಗೂಗಲ್ ಮಾಡಿರುವ ಅವಾಂತರದ ಸ್ಕ್ರೀನ್ ಶಾಟ್ ತೆಗೆದಿರುವ ರಮ್ಯಾ ಅದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಲ್ಲದೆ ಗೂಗಲ್ ಇಂಡಿಯಾ ಸಂಸ್ಥೆಗೂ ತಿಳಿಸಿದ್ದಾರೆ. ಜೊತೆಗೆ ನಿಮ್ಮ ಸಂಗ್ರಹದಲ್ಲಿ ಬರೀ ಕಸಕಡ್ಡಿಯಂತಹ ಹೊಲಸೇ ತುಂಬಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ರಮ್ಯಾ ಪ್ರಧಾನಿ ಬಗ್ಗೆ ಟ್ವೀಟ್ ಮಾಡುವ ಮೂಲಕ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ, ಸಂಸತ್ತಿನಲ್ಲಿ ಮೋದಿ ಅವರಿಗೆ ರಾಹುಲ್ ಜೊತೆ 15 ನಿಮಿಷ ಚರ್ಚೆ ಮಾಡುವ ಧೈರ್ಯವಿದೆಯಾ ಎಂದು ಪ್ರಶ್ನೋತ್ತರವನ್ನು ಪೋಸ್ಟ್ ಮಾಡಿದ್ದರು.
.@Google @GoogleIndia what algorithm of yours allows this?! You’re so full of junk- pic.twitter.com/GHyxh3fEWm
— Divya Spandana/Ramya (@divyaspandana) April 25, 2018