ಅತ್ಯಾಚಾರಕ್ಕೊಳಗಾಗುತ್ತಿದ್ದ ಮಹಿಳೆಯನ್ನು ಕಾಪಾಡಲು ಚಲಿಸುತ್ತಿದ್ದ ರೈಲಿನಿಂದ ಜಿಗಿದ ಪೇದೆ !

ಚೆನ್ನೈ : ಅತ್ಯಾಚಾರಕ್ಕೊಳಗಾಗುತ್ತಿದ್ದ ಮಹಿಳೆಯನ್ನು ರಕ್ಷಿಸಲು ಪೇದೆಯೊಬ್ಬರು ತಮ್ಮ ಪ್ರಾಣದ ಹಂಗು ತೊರೆದು ರೈಲಿನಿಂದ ಹೋರಗೆ ಹಾರಿ ಮಹಿಳೆಯನ್ನು ರಕ್ಷಿಸಿರುವ ಸಂಗತಿ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈನ ಪಾರ್ಕ್‌ ಟೌನ್‌ ನಿಲ್ದಾಣದಲ್ಲಿ ಈ ಘಟನೆ ನಡೆದಿದ. ರೈಲ್ವೇ ರಕ್ಷಣಾ ಪಡೆಯ ಸಿಬ್ಬಂದಿಯಾಗಿರುವ ಪೇದೆ ಶಿವಾಜಿ ಎಂಬುವವರು ರಾತ್ರಿ ಗಸ್ತು ತಿರುಗುವ ಕರ್ತವ್ಯಕ್ಕಾಗಿ ವಲಚೇರಿಯಿಂದ ಚೆನ್ನೈನ ಬೀಚ್‌ಗೆ ಲೋಕಲ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಸುಮಾರು 11.45ರ ಸುಮಾರಿಗೆ ಚಿಂತಾದ್ರಿಪೇಟ್‌ ನಿಲ್ದಾಣದಿಂದ ರೈ ಲು ಹೊರಟಿದ್ದು ಪಕ್ಕದಲ್ಲಿದ್ದ ಮಹಿಳಾ ಬೋಗಿಯಿಂದ ಚೀರಾಟ ಕೇಳಿಬಂದಿತ್ತು.

ರೈಲು ನಿದಾನವಾಗುವುದನ್ನು ಕಾಯುತ್ತಿದ್ದ ಶಿವಾಜಿ ಕೂಡಲೆ ಬೋಗಿಯಿಂದ ಪ್ಲಾಟ್‌ಫಾರ್ಮ್‌ಗೆ ಹಾರಿದ್ದಲ್ಲದೆ ಮಹಿಳಾ ಬೋಗಿಗೆ ನುಗ್ಗಿದ್ದಾರೆ. ಮಹಿಳಾ ಬೋಗಿಯಲ್ಲಿ ಯುವಕನೊಬ್ಬ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಜೆಯಲು ಯತ್ನಿಸುತ್ತಿದ್ದು ಕೂಡಲೆ ಆತನನ್ನು ದೂರಕ್ಕೆ ತಳ್ಳಿ ಮಹಿಳೆಯನ್ನು ರಕ್ಷಿಸಿದ್ದಾರೆ.

ಈ ಘಟನೆ ನಡೆಯುವ ವೇಳೆ ರೈಲು ನಿಂತಿದ್ದು, ಕೂಡಲೆ ಮತ್ತೊಂದು ಬೋಗಿಯಲ್ಲಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೂಡಲೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.

ತನ್ನ ಪ್ರಾಣದ ಹಂಗು ತೊರೆದು ಮಹಿಳೆಯನ್ನು ರಕ್ಷಿಸಿದ್ದ ಪೇದೆಯನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com