ಕಾಸ್ಟಿಂಗ್‌ ಕೌಚ್‌ ವಿರುದ್ದ ಬಟ್ಟೆಬಿಚ್ಚಿ ಪ್ರತಿಭಟಿಸಿದ್ದ ಶ್ರೀರೆಡ್ಡಿಗೆ ಚಾನ್ಸ್‌ ಕೊಡ್ತೀನಿ ಎಂದ ನಿರ್ದೇಶಕ

ಕಾಸ್ಟಿಂಗ್‌ ಕೌಚ್‌ ವಿರುದ್ದ ಬೀದಿಗಿಳಿದು ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದ ಶ್ರೀರೆಡ್ಡಿಗೆ ಖ್ಯಾತ ನಿರ್ದೇಶಕರೊಬ್ಬರು ಸಿನಿಮಾದ ಆಫರ್‌ ನೀಡಿದ್ದಾರೆ. ಹೌದು ಖ್ಯಾತ ನಿರ್ದೇಶಕ ರಾಂ ಗೋಪಾಲ್‌ ವರ್ಮಾ ಶ್ರೀರೆಡ್ಡಿ ನಿಭಾಯಿಸುವ ಪಾತ್ರ ಇದ್ದರೆ ಖಂಡಿತಾ ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ.

ಸದ್ಯ ರಾಂ ಗೋಪಾಲ್‌ ವರ್ಮಾ ನಿರ್ದೇಶನದಲ್ಲಿ ನಾಗಾರ್ಜುನ ನಟಿಸಿರುವ ಆಫೀಸರ್‌ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು. ಮೇ ತಿಂಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ. ಕಾಸ್ಟಿಂಗ್‌ ಕೌಚ್‌ ಹೆಸರಿನಲ್ಲಿ ಖ್ಯಾತ ನಟರ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದ ರಾಂಗೋಪಾಲ್‌ ವರ್ಮಾ ಅವರ ಈ ಸಿನಿಮಾವನ್ನ ನಿಷೇಧ ಮಾಡಬೇಕು ಎಂದು ಒಂದಷ್ಟು ಮಂದಿ ಆಗ್ರಹಿಸಿದ್ದಾರೆ. ಈ ಮಧ್ಯೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಶ್ರೀರೆಡ್ಡಿಗೆ ಸಿನಿಮಾ ಮಾಡುವುದಾಗಿ ಹೇಳಿದ್ದು, ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಪವನ್ ಕಲ್ಯಾಣ್ ವಿರುದ್ಧ ಶ್ರೀರೆಡ್ಡಿ ಮಾತನಾಡಲು ರಾಂ ಗೋಪಾಲ್‌ ವರ್ಮಾ ಪ್ರಚೋದನೆ ನೀಡಿರುವುದಾಗಿ ಗುಸು ಗುಸು ಕೇಳಿಬರುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com