ಅಶೋಕ್‌ ಸ್ಪರ್ಧೆಗೆ ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್‌ : ನಿಟ್ಟುಸಿರು ಬಿಟ್ಟ ಖೇಣಿ

ಬೀದರ್‌ : ಬೀದರ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ್‌ ಖೇಣಿ ಅವರ ನಾಮಪತ್ರ ಅಂಗೀಕಾರವಾಗಿದ್ದು, ಈ ಮೂಲಕ ಬಿಗ್‌ ರಿಲೀಫ್‌ ಸಿಕ್ಕಿದೆ.

ಸಾಮಾಜಿಕ ಕಾರ್ಯಕರ್ತ ಅಬ್ರಾಹಂ ಎಂಬುವವರು ಅಶೋಕ್‌ ಖೇಣಿ ಅವರ ನಾಮಪತ್ರವನ್ನು ಅಂಗೀಕಾರ ಮಾಡದಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನಲ್ಲಿ ಖೇಣಿ ಅಮೆರಿಕದಲ್ಲಿ ಹೊಂದಿರುವ ನಿವಾಸದ ವಿಳಾಸ ಹಾಗೂ ಇತರೆ ದಾಖಲೆಗಳನ್ನು ನೀಡಿಲ್ಲ ಎಂದು  ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ತಡೆ ಹಿಡಿಯಲಾಗಿತ್ತು.

ಆದರೆ ನಾಮಪತ್ರ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು ಅಶೋಕ್‌ ಖೇಣಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್‌ ನೀಡಿದ್ದಾರೆ.

Leave a Reply

Your email address will not be published.