BSY, ರೆಡ್ಡಿ ಬ್ರದರ್ಸ್‌ ಹಾಗೂ ಕುಮಾರಸ್ವಾಮಿ ಇವರೆಲ್ಲರ ಎದುರು ನಿಂತವ ನಾನೊಬ್ಬನೇ : CM

ಬೆಂಗಳೂರು : ಯಡಿಯೂರಪ್ಪ, ರೆಡ್ಡಿ ಸಹೋದರರು ಮತ್ತು ಕುಮಾರಸ್ವಾಮಿ ಇವರೆಲ್ಲ ನನ್ನ ವಿರುದ್ಧ ನಿಂತಿರುವ ಚುನಾವಣೆ ಇದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷದ ಮುಖಂಡರೂ ಒಂದಾಗಿದ್ದಾರೆ. ಆದರೆ ಜನರ ಆಶಿರ್ವಾದ ನನ್ನ ಮೇಲಿದೆ. ನನ್ನ ಗೆಲುವು ನಿಶ್ಚಿತ ಎಂದಿದ್ದಾರೆ. ಅಲ್ಲದೆ ನನ್ನ ವಿರುದ್ಧ ಪ್ರಚಾರ ಮಾಡಲು ಯೋಗಿ ಆದಿತ್ಯನಾಥರನ್ನು ಕರೆತರುತ್ತಿದ್ದಾರೆ. ಆದರೆ ್ವು ತಮ್ಮ ರಾಜ್ಯವನ್ನು ಸರಿಮಾಡಿಕೊಳ್ಳಲಿ. ತಮ್ಮ ಸ್ವಂತ ಕ್ಷೇತ್ರದಲ್ಲೇ ಗೆಲುವು ಸಾಧಿಸಲು ಸಾಧ್ಯವಾಗದವರು ನನ್ನ ವಿರುದ್ಧ ಏನು ಮಾಡಲು ಸಾಧ್ಯ ಎಂದು ಕಾಲೆಳೆದಿದ್ದಾರೆ. ‘

ಜೈಲಿಗೆ ಹೋದ ಯಡಿಯೂರಪ್ಪನನ್ನು ಜನ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಅಮಿತ್ ಶಾ, ಮೋದಿ, ಯೋಗಿಯಂತಹವರನ್ನು ಕರೆತರುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಾಯಕರೇ ಇಲ್ಲ. ಆದರೆ ನಾನು ಇಲ್ಲಿಯವನು, ನನಗೆ ಜನ  ಮತ ಹಾಕುವುದು ಶತಸಿದ್ಧ ಎಂದಿದ್ದಾರೆ.

Leave a Reply

Your email address will not be published.