IGP ಅಲೋಕ್ ಕುಮಾರ್‌ಗೆ ಬೆದರಿಕೆ : ಕರೆ ಮಾಡಿದ್ದು ಯಾರು ಅಂತ ಗೊತ್ತಾದ್ರೆ ಶಾಕ್‌ ಗ್ಯಾರೆಂಟಿ

ಬೆಂಗಳೂರು : ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ಅವರ ಜೀವ ಬೆದರಿಕೆ ಕರೆ ಹಾಗೂ ಸಂದೇಶ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ.

ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದ ಮರಣದಂಡನೆ ಶಿಕ್ಷೆಗೆ ಒಳಗಾದ ಕೈದಿಯಿಂದ ಈ ಜೀವ ಬೆದರಿಕೆ ಕರೆ ಬಂದಿದ್ದು ಅಚ್ಛರಿಗೆ ಕಾರಣವಾಗಿದೆ. ಕೇರಳ ಮೂಲದ ಹಾಗೂ ಮಂಗಳೂರು ಕೊಲೆ ಪ್ರಕರಣದದಡಿ ಶಿಕ್ಷೆ ಅನುಭವಿಸುತ್ತಿರುವ ಶಹಜಾಯ್ ಎಂಬಾತನೇ ಐಜಿಪಿ ಅಲೋಕಕುಮಾರ್ ಅವರಿಗೆ ಬೆದರಿಕೆ ಕರೆ ಹಾಗೂ ಸಂದೇಶ ರವಾನಿಸಿರುವ ಆರೋಪಿ ಅನ್ನುವದು ಸದ್ಯಕ್ಕೆ ತಿಳಿದು ಬಂದಿರುವ ಸಂಗತಿಯಾಗಿದೆ.

ಎಪ್ರಿಲ್ 21ರಂದು ರಾತ್ರಿ 7 ಘಂಟೆಗೆ ಐಜಿಪಿ ಅಲೋಕ್‌ ಕುಮಾರ್ ಅವರಿಗೆ ಮೂರು ಬಾರಿ ಕರೆ ಸೇರಿದಂತೆ ಮೆಸೇಜ್‌ ಸಹ ಬಂದಿತ್ತು. ಐಜಿಪಿ ಅವರ ಆಪ್ತ ಸಹಾಯಕ ಸಂಜೀವ ಸಂಗಣ್ಣವರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಎಪಿಎಂಸಿ ಪೊಲೀಸರು ಹಾಗೂ ಹಿಂಡಲಗಾ ಜೈಲಿನ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ಸಿಮ್‍ಕಾರ್ಡ್ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಕೈದಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಮಹಾನಗರ ಪೊಲೀಸರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಕುರಿತು ಇ ಕುರಿತು ಏನ್ ಸುದ್ದಿಗೆ ಪ್ರತಿಕ್ರಿಯಿಸಿರುವ ಐಜಿಪಿ ಅಲೋಕ್ ಕುಮಾರ್ ಅವರು, ಈ ರೀತಿಯ ಬೆದರಿಕೆ ಕರೆಗಳು ಬರುವುದು ನನಗೇನು ಹೊಸದಲ್ಲ. ನಾನು ಭಯೋತ್ಪಾದನೆ, ನಕ್ಸಲೈಟ್, ಅಂಡರ್‌ ವರ್ಲ್ಡ್‌ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಇದರಲ್ಲಿ ಶಿಕ್ಷೆಗೆ ಒಳಗಾದ ಕೆಲ ಕೈದಿಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಈ ರೀತಿ ಕರೆ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published.