ಮಾನಸಿಕ ಅಸ್ವಸ್ಥ ಅಪ್ಪನನ್ನು ಕಟ್ಟಿ ಹಾಕಿ ಥಳಿಸಿದ ಪಾಪಿ ಪುತ್ರರು : ವಿಡಿಯೋ ವೈರಲ್

ಲಖನೌ : ಮತ್ತೊಂದು ಅಮಾನವೀಯ ಘಟನೆಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಮಾನಸಿಕ ಅಸ್ವಸ್ಥ ತಂದೆಯ ಕೈಗಳನ್ನು ಕಟ್ಟಿ ಹಾಕಿದ ಮಕ್ಕಳು ಹೆತ್ತಪ್ಪನಿಗೇ  ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ನೂರುಲ್‌ ಎಂಬಾತ ಕೆಲ ವರ್ಷಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು. ಈತ ಮಾನಸಿಕ  ಅಸ್ವಸ್ಥನಾದ ಬಳಿಕ ಮಕ್ಕಳಾದ ಮೋನು ಹಾಗೂ ರಹೀಂ ಎಂಬುವವರು ನಾಲ್ಕು ವರ್ಷಗಳ ಹಿಂದೆಯೇ ಮನೆಯಿಂದ ಹೊರಹಾಕಿದ್ದರು. ಆದರೂ ತಂದೆ ಪದೇ ಪದೇ ಮಕ್ಕಳ ಮನೆಗೆ ಬರುವುದು, ಮಕ್ಕಳು ಮತ್ತೆ ಅಪ್ಪನನ್ನು ಮನೆಯಿಂದ ಆಚೆ ಹಾಕುವುದು ಮಾಡುತ್ತಿದ್ದರು.

ಅಂತೇಯೆ ಸೋಮವಾರ ಸಹ ತಂದೆ ಮನೆಗೆ ಬಂದಿದ್ದಾನೆ. ಇದೇ ವೇಳೆ ಮತ್ತೆ ಮಕ್ಕಳು ಆತನನ್ನು ಹೊರದಬ್ಬಿದ್ದಾರೆ. ಹೊರ ಹೋದ ತಂದೆ ಮನೆಯ ಮೇಲೆ ಇಟ್ಟಿಗೆ ಎಸೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಕ್ಕಳು ಅಪ್ಪನ ಕೈಗಳನ್ನು ಕಟ್ಟಿಹಾಕಿದ್ದಲ್ಲದೆ ಥಳಿಸಿದ್ದಾರೆ.

ಕೊನೆಗೆ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಮಕ್ಕಳನ್ನು ಬಂಧಿಸಿ, ಕೆಲ ಗಂಟೆಗಳ ಬಳಿಕ ಬಿಟ್ಟಿದ್ದಾರೆ.  ಈ ಸಂಬಂಧ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.

 

Leave a Reply

Your email address will not be published.