ಬಿಜೆಪಿಯಲ್ಲಿ ಬಿಕ್ಕಟ್ಟು : ಒಂದೇ ಕ್ಷೇತ್ರದಲ್ಲಿ ಇಬ್ಬರಿಗೆ ಬಿ ಫಾರಂ ಕೊಟ್ಟ ಕಮಲ ನಾಯಕರು !

ರಾಯಚೂರು : ಜಿಲ್ಲೆಯ ಬಿಜೆಪಿಯಲ್ಲಿ ಭಿನ್ನಮತದ ಬಳಿಕ ಮತ್ತೊಂದು ಬಿಕ್ಕಟ್ಟು ಶುರುವಾಗಿದೆ. ಮಾನ್ವಿ ಕ್ಷೇತ್ರದಲ್ಲಿ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ.

ಬಿಜೆಪಿಯ ಮೂರನೇ ಪಟ್ಟಿಯಲ್ಲಿ ಮಾನ್ವಿ ಕ್ಷೇತ್ರಕ್ಕೆ ಬಿ.ಎಸ್.ಯಡಿಯೂರಪ್ಪ ಆಪ್ತ ಬಿ.ಮಾನಪ್ಪ ನಾಯಕ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯ್ತು. ಮಾನಪ್ಪ ನಾಯಕಗೆ ಬಿ ಫಾರಂ ನೀಡಿದ್ದು ನಾಮಪತ್ರ ಸಲ್ಲಿಸಿದ್ದಾರೆ. ಅದಾದ ಬಳಿಕ ಮತ್ತೊಬ್ಬ ಆಕಾಂಕ್ಷಿ ಶರಣಪ್ಪ ಗುಡದಿನ್ನಿಗೂ ಕೂಡ ಬಿಜೆಪಿ ಬಿ ಫಾರಂ ನೀಡಲಾಗಿದೆ. ಮೊನ್ನೆ ಹಾಗೂ ನಿನ್ನೆ ಇಬ್ಬರೂ ಬಿಜೆಪಿ ಆಕಾಂಕ್ಷಿಗಳು ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಆರಂಭವಾಗಿದೆ. ಇನ್ನು ಮೊದಲಿಗೆ ಬಿಜೆಪಿ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದ ಮಾನಪ್ಪ ನಾಯಕ, ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು ಬಿಜೆಪಿ ಎರಡನೇ ಅಭ್ಯರ್ಥಿ ಶರಣಪ್ಪ ಗುಡದಿನ್ನಿ ನಕಲಿ ಬಿ ಫಾರಂ ಸಲ್ಲಿಸಿದ್ದಾರೆ. ಹೀಗಾಗಿ ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ. ಇನ್ನು ಮಾನಪ್ಪ ನಾಯಕ ಪಕ್ಷೇತರ ಅಭ್ಯರ್ಥಿಯಾಗಿಯೂ ನಾಮಪತ್ರ ಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com