ಯೋಗೀಶ್ವರ್‌ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಪ್ರವೇಶ ನಿರ್ಬಂಧಿಸಿ ಮನೆಗಳ ಮುಂದೆ ಬೋರ್ಡ್‌

ಚನ್ನಪಟ್ಟಣ : ಬಿಜೆಪಿ ಸೇರಿ ಚುನಾವಣೆ ಕಣಕ್ಕೆ ಧುಮಕಿರುವ ಚನ್ನಪಟ್ಟಣ ಶಾಸಕ ಸಿ.ಪಿ ಯೋಗೀಶ್ವರ್​ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬಿಜೆಪಿ ಹಾಗೂ ಪಕ್ಷದ ಕಾರ್ಯಕರ್ತರಿಗೆ ಕಡ್ಡಾಯವಾಗಿ ನಮ್ಮ ಬಡಾವಣೆಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂಬ ಫಲಕಗಳು ಚನ್ನಪಟ್ಟಣದ ಬಹುತೇಕ ಮನೆಗಳ ಮೇಲೆ ರಾರಾಜಿಸುತ್ತಿವೆ.

ಚನ್ನಪಟ್ಟಣದ ಇಸ್ಲಾಂಪುರ ಮೊಹಲ್ಲಾದ ಹಲವು ಮನೆಗಳ ಮೇಲೆ ಇಂಥ ಫಲಕಗಳನ್ನು ಹಾಕಲಾಗಿದೆ. ಸಿ.ಪಿ ಯೋಗೀಶ್ವರ್​ ಪಕ್ಷಾಂತರ ಮಾಡಿ ನಮ್ಮ ಕ್ಷೇತ್ರದ ಮತದಾರರಿಗೆ ವಂಚನೆ ಮಾಡುತ್ತಿದ್ದಾರೆ. 20 ವರ್ಷಗಳಿಂದ ಸ್ಪರ್ಧೆ ಮಾಡುತ್ತಿರುವ ಅವರಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ನಾನು ನೀರಾವರಿ ಹರಿಕಾರ ಎಂದು ಹೇಳಿಕೊಳ್ಳುವ, ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ ಎನ್ನುತ್ತಿರುವ ಯೋಗೀಶ್ವರ್​ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಹೀಗಾಗಿ ಸಿ.ಪಿ. ಯೋಗೀಶ್ವರ್​ಗೆ ತಕ್ಕ ಪಾಠ ಕಲಿಸಲು ನಾವು ನಿರ್ಧರಿಸಿರುವುದಾಗಿ ಜನ ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published.