IPL : ಮುಂಬೈ ಇಂಡಿಯನ್ಸ್ 87ಕ್ಕೆ ಆಲೌಟ್ : ಸನ್ ರೈಸರ್ಸ್ ತಂಡಕ್ಕೆ ಜಯ

ಮುಂಬೈನ ವಾಂಖೇಡೆ ಮೈದಾನದಲ್ಲಿ ಮಂಗಳವಾರ ನಡೆದ ಐಪಿಎಲ್ ಟಿ20 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದ್ರಾಬಾದ್ ತಂಡ 31 ರನ್ ಜಯ ದಾಖಲಿಸಿದೆ. ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಮುಂಬೈ ಟೂರ್ನಿಯಲ್ಲಿ 5ನೇ ಸೋಲನುಭವಿಸಿತು.

ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ 18.4 ಓವರುಗಳಲ್ಲಿ 118 ಕ್ಕೆ ಆಲೌಟ್ ಆಯಿತು. ನಾಯಕ ಕೇನ್ ವಿಲಿಯಮ್ಸನ್ 29 ಹಾಗೂ ಯೂಸುಫ್ ಪಠಾಣ್ 29 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 18.5 ಓವರ್ ಗಳಲ್ಲಿ 87ಕ್ಕೆ ಆಲೌಟ್ ಆಯಿತು. ಮುಂಬೈ ಪರವಾಗಿ ಸೂರ್ಯಕುಮಾರ್ ಯಾದವ್ 34 ಹಾಗೂ ಕೃಣಾಲ್ ಪಾಂಡ್ಯ 24 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸಮನ್ ಗಳ್ಯಾರೂ ಎರಡಂಕಿಯನ್ನು ತಲುಪಲಿಲ್ಲ.

4 ಓವರ್ ಬೌಲಿಂಗ್ ಮಾಡಿ 11 ರನ್ ನೀಡಿ 2 ವಿಕೆಟ್ ಕಬಳಿಸಿದ ಸನ್ ರೈಸರ್ಸ್ ಸ್ಪಿನ್ ಬೌಲರ್ ರಾಶಿದ್ ಖಾನ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com