ಬಾಂಬ್‌ ಸ್ಫೋಟದ ಚಿತ್ರೀಕರಣದ ವೇಳೆ ಹೊತ್ತಿದ ಬೆಂಕಿ : ಸುಟ್ಟು ಭಸ್ಮವಾಯ್ತು “ಕೇಸರಿ” ಸೆಟ್‌

ಸತಾರಾ : ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಅವರ ಕೇಸರಿ ಚಿತ್ರೀಕರಣ ಸೆಟ್‌ನಲ್ಲಿ  ಬೆಂಕಿ ಅವಗಢ ಸಂಭವಿಸಿದೆ.  ಮಹರಾಷ್ಟ್ರದ ಸತಾರಾ ಜಿಲ್ಲೆಯ ವೈ ತೆಹಸಿಲ್‌ನಲ ಪಿಂಪೋಡೆ ಬುದ್ರಕ್‌ ಗ್ರಾಮದಲ್ಲಿ ಶೂಟಿಂಗ್‌ ನಡೆಯುತ್ತಿದ್ದು ಈ ವೇಳೆ ಅವಗಢ ಸಂಭವಿಸಿದೆ.
ಚಿತ್ರದ ಕ್ಲೈಮ್ಯಾಕ್ಸ್  ದೃಶ್ಯಗಳನ್ನು ಚಿತ್ರೀಕರಿಸುವ ವೇಳೆ ಬಾಂಬ್‌ ಸ್ಫೋಟಿಸಲಾಗಿತ್ತು. ಈ ವೇಳೆ ಬೆಂಕಿಯ ಕಿಡಿಯೊಂದು ವಸ್ತುವಿನ ಮೇಲೆ ಬಿದ್ದಿದ್ದು, ಪರಿಣಾಮ ಅವಗಢ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಕ್ಷಯ್‌ ಕುಮಾರ್‌ ತಮ್ಮ ಪಾರ್ಟ್‌ನ ಶೂಟಿಂಗ್ ಮುಗಿಸಿ ಹಿಂತಿರುಗಿದ್ದರು. ಈ ವೇಳೆ ಘಟನೆ ನಡೆದಿದೆ.  ಘಟನೆ ಬಗ್ಗೆ ಚಿತ್ರತಂಡ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
1897ರಲ್ಲಿ ನಡೆದ ಯುದ್ಧದಲ್ಲಿ 21 ಮಂದಿ ಸಿಖ್ಖರು 10 ಸಾವಿರ ಮಂದಿ ಅಫ್ಘನ್ನರ ಜೊತೆ ಯುದ್ಧ ಮಾಡಿದ್ದರು. ಈ ಸನ್ನಿವೇಶದಿಂದ ಸ್ಪೂರ್ತಿ ಪಡೆದು ಸಿನಿಮಾ ಮಾಡಲಾಗುತ್ತಿದೆ. ಅನುರಾಗ್‌ ಸಿಂಗ್‌ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಪರಿಣಿತಿ ಛೋಪ್ರಾ ನಾಯಕಿಯಾಗಿ ಅಭಿನಯಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com