HDK ಗೆ 2 ಲಕ್ಷ ಕೊಟ್ಟು ನೀವೇ ನಾಡಿನ ಮುಖ್ಯಮಂತ್ರಿಯಾಗಬೇಕು ಎಂದು ಹಾರೈಸಿದ ರೈತ

ಮಾಗಡಿ :  ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿಯವರಿಗೆ 2 ಲಕ್ಷ ಹಣ ನೀಡಿರುವ ರೈತನೊಬ್ಬ ನೀವೇ ನಾಡಿನ ಮುಖ್ಯಮಂತ್ರಿಯಾಗಬೇಕು ಎಂದು ಹಾರೈಸಿದ್ದಾರೆ.

ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಗ್ರಾಮದ ಕೃಷ್ಣಪ್ಪ ಎಂಬ ರೈತ ಎಚ್‌ಡಿಕೆಗೆ 2 ಲಕ್ಷ ಹಣ ನೀಡಿದ್ದು, ಎಷ್ಟೇ ಬೇಡವೆಂದರೂ, ನೀವು ಹಣ ತೆಗೆದುಕೊಳ್ಳಲೇ ಬೇಕು ಎಂದು ಕೃಷ್ಣಪ್ಪ ಒತ್ತಾಯಿಸಿದ್ದಾರೆ.

ಏಕಾಂಗಿಯಾಗಿ ರಾಜ್ಯದಾದ್ಯಾಂತ ರೈತರ ಪರವಾದ ಧ್ವನಿಯಾಗಿರುವ ಕುಮಾರಸ್ವಾಮಿಯವರಿಗೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆಂದು ಎಂದು ರೈತ ಹೇಳಿದ್ದು, ಕುಮಾರಸ್ವಾಮಿ ಬಳಿ ಹಣ ಇಲ್ಲ. ಕಾಂಗ್ರೆಸ್ ಬಿಜೆಪಿಯವರು ಬೇಜಾನ್ ಹಣ ಖರ್ಚು ಮಾಡ್ತಿದಾರೆ. ನಮ್ಮೂರು ಕೂಟಗಲ್ ನಲ್ಲೇ ಕಾಂಗ್ರೆಸ್ ನವರು ಲಕ್ಷ ಲಕ್ಷ ಹಣ ಖರ್ಚು ಮಾಡ್ತಿದಾರೆ. ಅದನ್ನ ನೋಡಿದ ನಾನು ದುಡಿದು ಸೇರಿಸಿಟ್ಟಿದ್ದ 2 ಲಕ್ಷ ಹಣವನ್ನ ಕುಮಾರಣ್ಣನಿಗೆ ಕೊಟ್ಟಿರುವುದು ನನಗೆ ಆತ್ಮ ತೃಪ್ತಿ ಇದೆ.
ನಾನು ಯಾರು ಅನ್ನೋದು ಕುಮಾರಣ್ಣನಿಗೆ ಗೊತ್ತೊ ಇಲ್ವೋ ಗೊತ್ತಿಲ್ಲ. ಆದರೆ ದೇವೇಗೌಡ್ರು ಕುಮಾರಣ್ಣ ರೈತರನ್ನ ಕಾಪಾಡ್ತಾರೆ ಅನ್ನೋ ನಂಬಿಕೆ ನನಗಿದೆ. ಆದ್ದರಿಂದ ನಾನು ಎರಡು ಲಕ್ಷ ಹಣ ಕೊಟ್ಟಿದ್ದೇನೆ. ಕುಮಾರಣ್ಣರಿಂದ ನನಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲ. ಅವರು ಮುಖ್ಯಮಂತ್ರಿಯಾಗಬೇಕು ಅನ್ನೋದೊಂದೇ ಆಸೆ  ಎಂದು ಕೃಷ್ಣಪ್ಪ ಹೇಳಿದ್ದಾರೆ.

Leave a Reply

Your email address will not be published.