2019 ವಿಶ್ವಕಪ್ : ಜೂನ್ 16ರಂದು ಮ್ಯಾಂಚೆಸ್ಟರ್ ನಲ್ಲಿ ಭಾರತ – ಪಾಕ್ ಮುಖಾಮುಖಿ

‘ 2019 ರ ವಿಶ್ವಕಪ್ ಟೂರ್ನಿಯಲ್ಲಿ ಜೂನ್ 16 ರಂದು ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಸಾಂಪ್ರದಾಯಿಕ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಏಕದಿನ ಪಂದ್ಯ ನಡೆಯಲಿದೆ. ಜೂನ್ 5 ರಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ ‘ ಎಂದು ಬಿಸಿಸಿಐ ಬುಧವಾರ ತಿಳಿಸಿದೆ.

ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2015 ರ ವಿಶ್ವಕಪ್ ನ ಉದ್ಘಾಟನಾ ಪಂದ್ಯದಲ್ಲಿ ಅಡಿಲೇಡ್ ಅಂಗಳದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ 76 ರನ್ ಅಂತರದ ಜಯ ಸಾಧಿಸಿತ್ತು. ಇದುವರೆಗೆ ಪಾಕಿಸ್ತಾನ ಭಾರತದ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಒಮ್ಮೆಯೂ ಗೆಲುವು ಸಾಧಿಸಿಲ್ಲ.

2019 ರಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಆತಿಥ್ಯ ವಹಿಸಲಿದೆ. ಒಟ್ಟು 10 ತಂಡಗಳು ಭಾಗವಹಿಸಲಿರುವ ಈ ವಿಶ್ವಕಪ್ ಟೂರ್ನಮೆಂಟ್ ಮೇ 30 ರಿಂದ ಜುಲೈ 14 ರವರೆಗೆ ನಡೆಯಲಿದೆ. ಟೂರ್ನಮೆಂಟ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಎಲ್ಲ ತಂಡಗಳೂ ಪರಸ್ಪರರ ವಿರುದ್ಧ ಒಂದೊಂದು ಪಂದ್ಯವನ್ನು ಆಡಲಿವೆ.

Leave a Reply

Your email address will not be published.

Social Media Auto Publish Powered By : XYZScripts.com