ಸಿದ್ದರಾಮಯ್ಯನವರೇ ನಿಮ್ಮ ಅಂಗೈಗೆ ಹಿಂದೂ ಕಾರ್ಯಕರ್ತರ ರಕ್ತದ ಕಲೆ ಅಂಟಿದೆ : DVS

ಬೆಂಗಳೂರು : ರಕ್ತ ಹರಿಸದೇ ಕಾಂಗ್ರೆಸ್‌ ಯಾವತ್ತಾದರೂ ಆಡಳಿತ ನಡೆಸಿದ್ದುಂಟೇ ಎಂದು ಟ್ವಿಟರ್‌ನಲ್ಲಿ ಮಾಜಿ ಸಿಎಂ ಡಿ. ವಿ ಸದಾನಂದ ಗೌಡ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಸಿಎಂ ವಿರುದ್ಧ ಟೀಕೆ ಮುಂದುವರಿಸಿರುವ ಸದಾನಂದಗೌಡ, ಮೊನ್ನೆಯಷ್ಟೇ ಸಿಎಂ ಅವರ ಅಂಗೈ ರಹಸ್ಯ ಬಯಲು ಮಾಡುತ್ತೇನೆ. ಟಿವಿಯಲ್ಲಿ ನಿಮ್ಮ ಕೈ ಕೆಂಪಾಗಿ ಕಂಡಿದೆ ಎಂದು ಟ್ವೀಟ್ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಇಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯನವರೇ ನಿಮ್ಮ ಅಂಗೈ ಕೆಂಪಾಗಿ ಕಂಡಿದೆ ಎಂದು ಈ ಹಿಂದೆ ಹೇಳಿದ್ದೆ. ಆ ಬಣ್ಣ ನಿಮ್ಮ ಆಡಳಿತದಲ್ಲಿ ಕೊಲೆಯಾಗಿ ಹೋದ 24 ಹಿಂದೂ ಕಾರ್ಯಕರ್ತರ ರಕ್ತವಾಗಿದೆ. ನಿಮ್ಮ ಪಕ್ಷದವರೇ ಆದ ಸಲ್ಮಾನ್ ಖುರ್ಷಿದ್ ಕಾಂಗ್ರೆಸ್‌ ಕೈಗೆ ಮುಸ್ಲೀಮರ ರಕ್ತ ಅಂಟಿದೆ ಎಂದಿದ್ದಾರೆ. ಈಗ ಹೇಳಿ ರಕ್ತ ಹರಿಸದೇ ಕಾಂಗ್ರೆಸ್ ಆಡಳಿತ ನಡೆಸಿದ್ದುಂಟೇ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com