ಚುನಾವಣೆಯಲ್ಲಿ ಸ್ಪರ್ಧಿಸ್ತಿರೋ ಹುಚ್ಚ ವೆಂಕಟ್‌ ಆಸ್ತಿ ಬೆಲೆ ಗೊತ್ತಾದ್ರೆ ತಲೆ ತಿರುಗೋದು ಗ್ಯಾರೆಂಟಿ !

ಬೆಂಗಳೂರು : ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಶಾಸಕ ಮುನಿರತ್ನ, ಬಿಜೆಪಿಯ ಮುನಿರಾಜು ಹಾಗೂ ಜೆಡಿಎಸ್‌ನ ಜಿ.ಎಚ್ ರಾಮಚಂದ್ರ ಅವರ ಪ್ರತಿಸ್ಪರ್ಧಿಯಾಗಿ ವೆಂಕಟ್‌ ಕಣಕ್ಕಿಳಿದಿದ್ದು, ಎಲ್‌. ವೆಂಕಟರಾಮ್ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಹುಚ್ಚ ವೆಂಕಟ್‌ ತಾನು ಯಾರ ಮನೆಗೂ ತೆರಳಿ ಪ್ರಚಾರ ಮಾಡುವುದಿಲ್ಲ, ಮತಭಿಕ್ಷೆ ಕೇಳಲ್ಲ, ತಾನು ಶಾಸಕನಾಗಬೇಕಿದ್ದರೆ ನೀವೇ ಮತಹಾಕಿ ಎಂದು ಮತದಾರರಿಗೆ ಆಜ್ಞೆ ಮಾಡಿದ್ದಾರೆ. ಅಲ್ಲದೆ ಕುಕ್ಕರ್‌ ಕೊಡುವವರ ತಲೆ ಮೇಲೆ ಕುಕ್ಕಿ ಎಂದಿದ್ದು, ವೆಂಕಟ್‌ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿಶೇಷತೆಗಳಿವೆ.

ಇನ್ನು ನಾಮಪತ್ರ ಸಲ್ಲಿಕೆ ವೇಳೆ ವೆಂಕಟ್‌ ತಮ್ಮ ಆಸ್ತಿ ವಿವರವನ್ನು ಬಹಿರಂಗಗೊಳಿಸಿದ್ದು, ಇವರ ಒಟ್ಟು ಆಸ್ತಿಯ ಮೊತ್ತ 13, 08,733 ರೂ ಮಾತ್ರ. ತಂದೆಯಿಂದ 1 ಕೋಟಿ 7 ಲಕ್ಷ ಸಾಲ ಮಾಡಿದ್ದಾರೆ. ವೆಂಕಟ್‌ ಅವರ ಬಳಿ ಸದ್ಯಕ್ಕಿರುವ ಹಣ 10 ಸಾವಿರ ರೂ ಆಗಿದ್ದು, ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ 124.42 ರೂ, ಐಸಿಐಸಿಐ ಬ್ಯಾಂಕಿನಲ್ಲಿ 133.85 ರೂ, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 0 ಬ್ಯಾಲೆನ್ಸ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ 61.06 ರೂ ಇದೆ. ಅಲ್ಲದೆ 1.5 ಲಕ್ಷ ರೂ ಮೌಲ್ಯದ ಹುಂಡೈ ಎಸೆಂಟ್‌ ಕಾರಿಗೆ. ಅವರ ಒಟ್ಟು ಚರಾಸ್ತಿ ಮೊತ್ತ 1, 60, 319 ರೂ ಮಾತ್ರ.

 

Leave a Reply

Your email address will not be published.

Social Media Auto Publish Powered By : XYZScripts.com