ಹೆಣ್ಣು ಮಗು ಹೆತ್ತಿದ್ದೇ ತಪ್ಪಾಯ್ತು….ತನ್ನ ಪತ್ನಿಗೆ ಎಂಥಾ ಶಿಕ್ಷೆ ಕೊಟ್ಬಿಟ್ಟ ಈ ಪತಿಮಹಾಶಯ !

ಬೆಂಗಳೂರು : ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನು ಮನೆಯಿಂದ ಹೊರಹಾಕಿದ ಘಟನೆ ನಡೆದಿದೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

2016ರಲ್ಲಿ ಪ್ರಮಿಳಾ ಎಂಬುವವರ ಜೊತೆ ಕುಮಾರ್ ಮದುವೆಯಾಗಿತ್ತು. ಮದುವೆಯಾದ ಕೆಲ ತಿಂಗಳಲ್ಲೇ ಒಡವೆ, ಸೈಟ್‌ ಬೇಕು ಎಂದು ಪತ್ನಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಇದೇ ವೇಳೆ ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಮತ್ತಷ್ಟು ಕಿರುಕುಳ ನೀಡಲು ಆರಂಭಿಸಿದ್ದ. ಬಳಿಕ ಏಪ್ರಿಲ್‌ 17ರಂದು ಪ್ರಮಿಳಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಪತಿ ಕುಮಾರ್ ಹೆಣ್ಣು ಮಗುವನ್ನು ಹೆತ್ತಿದ್ದಕ್ಕಾಗಿ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಪ್ರಮಿಳಾ ಕುಟುಂಬಸ್ಥರು ಎಷ್ಟೇ ಬೇಡಿಕೊಂಡರೂ ಕುಮಾರ್ ಪತ್ನಿಯನ್ನು ಮನೆಗೆ ಸೇರಿಸಿಲ್ಲ.

ಪ್ರಮಿಳಾ ಪೋಷಕರು ಮದುವೆ ಮಾಡುವಾಗ ಕುಮಾರ್‌ಗೆ 3 ಲಕ್ಷ ಹಣ ಹಾಗೂ 150 ಗ್ರಾಮ ಒಡವೆಯನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೂ ದುರಾಸೆಯಿಂದಾಗಿ ಪತಿ ಮತ್ತಷ್ಟು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎಂದು ಪ್ರಮಿಳಾ ಆರೋಪಿಸಿದ್ದಾೆರೆ.

ಪತಿಯ ವರ್ತನೆಯಿಂದ ಬೇಸತ್ತ ದೇವಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com