ಮತ್ತೆ ಪತಿ ಕೊಹ್ಲಿಯ ಟಿ-ಶರ್ಟ್ ಧರಿಸಿ ಮಿಂಚಿದ ಅನುಷ್ಕಾ ಶರ್ಮಾ…!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಬ್ಯಾಟಿಂಗ್ ನಿಂದ ಸದ್ದು ಮಾಡಿದರೆ, ಮೈದಾನದ ಹೊರಗೆ ತಮ್ಮ ಸ್ಟೈಲಿಶ್ ಡ್ರೆಸಿಂಗ್, ಕೇಶ ವಿನ್ಯಾಸ, ಟ್ಯಾಟೂಗಳಿಂದ ಗಮನ ಸೆಳೆಯುತ್ತಾರೆ. ವಿರಾಟ್ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ನಟನೆ ಹಾಗೂ ಫ್ಯಾಷನ್ ಸ್ಟೇಟ್ ಮೆಂಟ್ ಗಳಿಂದ ಸುದ್ದಿಯಲ್ಲಿರುತ್ತಾರೆ.

ಇತ್ತೀಚೆಗೆ ಅನುಷ್ಕಾ ಶರ್ಮಾ ತಮ್ಮ ಡ್ರೆಸಿಂಗ್ ವಿಷಯದಲ್ಲಿ ವಿಭಿನ್ನವಾದ ಟ್ರೆಂಡ್ ಒಂದನ್ನು ಆರಂಭಿಸಿದ್ದಾರೆ. ಅದೇನೆಂದರೆ ತಮ್ಮ ಡ್ರೆಸ್ ಗಳನ್ನು ಧರಿಸುವುದರ ಬದಲಿಗೆ, ಪತಿ ವಿರಾಟ್ ಕೊಹ್ಲಿಯ ಟಿ-ಶರ್ಟನ್ನು ಧರಿಸುವುದು.

Image result for virat anushka t shirt yet again

ಹೌದು, ಮಂಗಳವಾರ ಮುಂಬೈನ ವಿಮಾನ ನಿಲ್ದಾಣದಲ್ಲಿ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ವಿರಾಟ್ ಕೊಹ್ಲಿಯ ಟಿ-ಶರ್ಟ್ ಧರಿಸಿದ್ದಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ವಿರಾಟ್ ಕೊಹ್ಲಿ ಜಿಮ್ ಮಾಡುವಾಗ ಒಮ್ಮೆ ಇದೇ ಟೀ ಶರ್ಟನ್ನು ಧರಿಸಿದ್ದರು. ಅನುಷ್ಕಾ, ಇದಕ್ಕೂ ಮುಂಚೆಯೊಮ್ಮೆ ಕೊಹ್ಲಿಯ ಟಿ-ಶರ್ಟ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

Related image

One thought on “ಮತ್ತೆ ಪತಿ ಕೊಹ್ಲಿಯ ಟಿ-ಶರ್ಟ್ ಧರಿಸಿ ಮಿಂಚಿದ ಅನುಷ್ಕಾ ಶರ್ಮಾ…!

Leave a Reply

Your email address will not be published.

Social Media Auto Publish Powered By : XYZScripts.com