ಖಾತೆಗೆ 15 ಲಕ್ಷ ಯಾವಾಗ ಬರುತ್ತೆ ಎಂದು ಕೇಳಿದ್ದಕ್ಕೆ ಇದು RTI ಅಡಿ ಬರಲ್ಲ ಎಂದ PMO !!

ದೆಹಲಿ : ಪ್ರಧಾನಿ ಮೋದಿ ಲೋಕಸಭಾ ಚುನಾವಣೆಯ ವೇಳೆ ಜನರ ಅಕೌಂಟ್‌ಗೆ 15 ಲಕ್ಷ ರೂ ಹಾಕುತ್ತೇನೆ ಎಂದಿದ್ದರು.  ಆ 15 ಲಕ್ಷ ಯಾವಾಗ ಬರುತ್ತದೆ ಎಂಬ ಪ್ರಶ್ನೆಗೆಇದು ಆರ್‌ಟಿಐ ಕಾಯ್ದೆಯಡಿ ಬರುವುದಿಲ್ಲ ಎಂದು ಪ್ರಧಾನಿಗಳ ಕಾರ್ಯಾಲಯ ಹೇಳಿದೆ.

ನರೇಂದ್ರ ಮೋದಿ ಪ್ರಧಾನಿಯಾಗುವ ಮೊದಲಿನಿಂದಲೂ ಜನರ ಖಾತೆಗೆ 15 ಲಕ್ಷ ರೂಪಾಯಿ ಬರುತ್ತೆ ಎಂದು ಹೇಳುತ್ತಿದ್ದರು. ನಿಖರವಾಗಿ ಯಾವ ದಿನದಂದು ಈ ಹಣ ಜನರ ಖಾತೆಗಳಿಗೆ ಬರುತ್ತೆ ಎಂಬುದನ್ನು ತಿಳಿಸುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಕಾರ್ಯಾಲಯ, ಇದನ್ನು ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳ ಪ್ರಕಾರ ಮಾಹಿತಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ.


2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ, ವಿದೇಶಗಳಲ್ಲಿರುವ ಕಪ್ಪು ಹಣವನ್ನ ಭಾರತಕ್ಕೆ ವಾಪಸ್ ತಂದು, ಪ್ರತಿಯೊಬ್ಬರ ಖಾತೆಯಲ್ಲೂ 15 ಲಕ್ಷ ಹಾಕೋದಾಗಿ ಮೋದಿ ಭರವಸೆ ನೀಡಿದ್ದರು. ಇದಾಗಿ ಎರಡು ವರ್ಷಗಳ ಬಳಿಕ ನವೆಂಬರ್ 26, 2016ರಂದು ಆರ್​ಟಿಐ ಅರ್ಜಿ ಸಲ್ಲಿಸಲಾಗಿತ್ತು. ಮೋಹನ್ ಕುಮಾರ್ ಶರ್ಮಾ ಎನ್ನುವವರು ಸಲ್ಲಿಸಿದ್ದ ಅರ್ಜಿಯಲ್ಲಿ ನಿಖರ ದಿನಾಂಕವನ್ನ ತಿಳಿಸುವಂತೆ ಕೋರಿದ್ದರು. ಆದರೆ ಪ್ರಧಾನಿ ಕಾರ್ಯಾಲಯದಿಂದ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನನಗೆ ಸಂಪೂರ್ಣ ಮಾಹಿತಿ ಬಂದಿಲ್ಲ ಎಂದು ಕುಮಾರ್ ಶರ್ಮಾ ಹೇಳಿದ್ದಾರೆ.

Leave a Reply

Your email address will not be published.