ಚಿತ್ರರಂಗದಲ್ಲಿ ರೇಪ್‌ ಮಾಡೋದೂ ನಿಜ ಜೊತೆಗೆ ಅನ್ನ ಕೊಡೋದೂ ನಿಜ : ಸರೋಜ್ ಖಾನ್

ಮುಂಬೈ : ಇತ್ತೀಚೆಗಷ್ಟೇ ದೇಶಾದ್ಯಂತ ಕಾಸ್ಟಿಂಗ್‌ ಕೌಚ್‌ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಈ ಬೆನ್ನಲ್ಲೇ ಬಾಲಿವುಡ್‌ ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್‌ ಖಾನ್‌ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಬಾಲಿವುಡ್‌ನಲ್ಲಿ ಕಾಸ್ಟಿಂಗ್‌ ಕೌಚ್‌ ನೆಪದಲ್ಲಿ ನಡೆಸುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಬದಲಾಗಿ ನಮ್ಮ ಹೊಟ್ಟೆ ತುಂಬಿಸಲು ತುತ್ತು ಅನ್ನವನ್ನು ನೀಡುತ್ತದೆ ಎಂದಿದ್ದಾರೆ. ಕಾಸ್ಟಿಂಗ್ ಕೌಚ್‌ ಹೊಸತೇನಲ್ಲ ಬಾಬ ಅಝಮ್‌ ಕಾಲದಿಂದಲೂ ಇದೆ. ಸಿನಿಮಾ ರಂಗದಲ್ಲಿನ ಪ್ರತೀ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಪ್ರಯತ್ನ ಮಾಡುತ್ತಾರೆ. ಸರ್ಕಾರದ ವಕ್ತಾರರು ಸಿನಿಮಾ ಇಂಡಸ್ಟ್ರಿಯ ಹಿಂದೆ ಅದ್ಯಾಕೆ ಬೀಳುತ್ತಾರೋ ಗೊತ್ತಿಲ್ಲ. ಆದರೆ ಎಲ್ಲಾ ವಿಚಾರಗಳೂ ನಟಿಯ ಮೇಲೆ ಡಿಪೆಂಡ್‌ ಆಗಿರುತ್ತದೆ ಎಂದಿದ್ದಾರೆ.

ಆಕೆ ತನ್ನ ಮೇಲೆ ಅತ್ಯಾಚಾರವಾಗಬಾರದು ಎಂತಿದ್ದರೆ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿಯುವ ಅವಕಾಶವೂ ಇದೆ. ಆಕೆಯಲ್ಲಿ ಶ್ರದ್ಧೆ, ಕಲೆ ಇದ್ದರೂ ಎಲ್ಲಿಯಾದರೂ ಬದುಕಬಹುದು. ಆದರೆ ಸಿನಿಮಾ ರಂಗಕ್ಕೆ ಅವಮಾನವಾಗುವ ರೀತಿ ಮಾತನಾಡಬಾರದು ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ಶ್ರೀರೆಡ್ಡಿ, ಸರೋಜ್‌ ಖಾನ್‌ ಅವರ ಬಗ್ಗೆ ಇದುವರೆಗೂ ನಾನು ಗೌರವವಿಟ್ಟುಕೊಂಡಿದ್ದೆ. ಆದರೆ ಅದೆಲ್ಲವೂ ಈಗ ಕಡಿಮೆಯಾಗಿದೆ. ಹಿರಿಯ ವ್ಯಕ್ತಿಯಾಗಿ ಚಿಕ್ಕವರಿಗೆ ಮಾರ್ಗದರ್ಶನ ಮಾಡಬೇಕು. ಆದರೆ ಇಂತಹವರೇ ನಿರ್ಮಾಪಕರ ಗುಲಾಮರಂತೆ ವರ್ತಿಸಿದರೆ ಅಂತಹವರಿಗೆ ಬೆಲೆ ಇಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com