ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೂ ಯಡಿಯೂರಪ್ಪ 3 ತಿಂಗಳು ಸಿಎಂ ಆಗಿರಲ್ಲ : ಪ್ರಕಾಶ್ ರೈ

ಉಡುಪಿ : ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರು ತಿಂಗಳೂ ಸಹ ಯಡಿಯೂರಪ್ಪ ಅಧಿಕಾರದಲ್ಲಿ ಇರಲ್ಲ ಎಂದು ನಟ ಪ್ರಕಾಶ್‌ ರೈ ಹೇಳಿದ್ದಾರೆ. ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಎಸ್ ವೈ ಮಗನಿಗೆ ಟಿಕೆಟ್ ಕೊಡಲಿಲ್ಲ ಅಂತಾ 8ಅಭ್ಯರ್ಥಿಗಳು ಗಲಾಟೆ ಮಾಡ್ತಾರಂತೆ. ಮಗನಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಅಮಿತ್ ಶಾ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ ಬಂದ್ರೆ ಬಿಎಸ್ ವೈ ಕೈಕಟ್ಟಿ ನಿಲ್ಲುತ್ತಾರೆ. ಕನ್ನಡಿಗರಿಗೆ ಸ್ವಾಭಿಮಾನ ಇಲ್ವೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ, ಬಂದರೂ ಬಿಎಸ್ ವೈ ಮೂರೇ ತಿಂಗಳು ಇರೋದು. ಈ ಹಿಂದೆ ತೀಟೆ ತೀರಿಸಿಕೊಳ್ಳಲು ಅಧಿಕಾರಕ್ಕೆ ಬಂದಿದ್ದರು. ವಾಮಮಾರ್ಗದಿಂದ ಅಧಿಕಾರಕ್ಕೆ ಹಿಡಿಯುವುದೇ ಚಾಣುಕ್ಯತನನಾ…? ಎಂದು ಪ್ರಶ್ನಿಸಿದ್ದಾರೆ.

ಕರಾವಳಿಗರು ತುಂಬಾ ಶಾಂತಿಪ್ರಿಯರು. ಕೋಮುಗಲಭೆ, ಗಲಾಟೆ ಇಲ್ಲಿನ ಜನರು ಇಷ್ಟಪಡಲ್ಲ. ಬಿಜೆಪಿ ಮಾರಣಾಂತಿಕ ಕಾಯಿಲೆ ತರುವಂಥ ಪಕ್ಷ. ಇಂಥ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು. ನಾನು ಎಲ್ಲಾ ಭಾಷೆಗಳಲ್ಲಿ, ಭಾವಗಳಲ್ಲಿಯೂ ಇದನ್ನೇ ಹೇಳುತ್ತಿರುವುದು. ನನ್ನನ್ನು ದ್ವೇಷದಿಂದ ಕೊಲ್ಲುವುದಾದರೂ ನನಗೆ ಭಯವಿಲ್ಲ. ನಾನು ಎಲ್ಲಾ ಮಾಡಿಯಾಗಿದೆ, ಹಣ ಮಾಡಿದ್ದೇನೆ, ನಟಿಸಿಯಾಗಿದೆ, ಜೀವನದಲ್ಲಿ ಎಲ್ಲವೂ ಆಗಿದೆ. ಧರ್ಮದ ಆಧಾರದ ಮೇಲೆ ಹೀಗೆ ಮುಂದುವರೆದರೆ ಮುಂದೊಂದು ದಿನ ಭಾರತವು ಪಾಕಿಸ್ತಾನವಾಗಲಿದೆ ಎಂದಿದ್ದಾರೆ.

 

ನನ್ನನ್ನು ಹಿಂದೂ ವಿರೋಧಿ ಅಂತಾ ಬಿಜೆಪಿ ಹಣೆಪಟ್ಟಿ ಕಟ್ಟುತ್ತಿದೆ. ಇದನ್ನು ಯಾರೂ ನಂಬಬೇಡಿ. ಬಿಜೆಪಿ ಶಾಂತಿಯುತವಾಗಿ ಚುನಾವಣೆ ನಡೆಸಿಲ್ಲ. ಮೇ 12 ರೊಳಗೆ ರಾಜ್ಯದಲ್ಲಿ ಗಲಭೆ ನಡೆಯುವ ಸಾಧ್ಯತೆ ಇದೆ. ಇದು ಅಮಿತ್ ಶಾ ನಡೆಸುವಂತಹ ರಾಜಕಾರಣ. ಗಲಾಟೆಯಾಗಬಹುದೆಂಬ ಆತಂಕ ನನ್ನನ್ನು ಕಾಡುತ್ತಿದೆ. ಬಿಎಸ್ ವೈಗಿಂತ ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com