WATCH : Sanju ಚಿತ್ರದ ಟೀಸರ್ ಬಿಡುಗಡೆ : ಸಂಜಯ್ ದತ್ ಪಾತ್ರದಲ್ಲಿ ರಣಬೀರ್ ಮಿಂಚು

ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ ‘ಸಂಜು’ ಚಿತ್ರದ ಟೀಸರ್ ಮಂಗಳವಾರ ಬಿಡುಗಡೆಗೊಂಡಿದೆ. ‘ Sanju – One man, Many Lives ‘ ಶೀರ್ಶಿಕೆಯಡಿ ತೆರೆ ಕಾಣಲಿರುವ ಈ ಚಿತ್ರವನ್ನು ಖ್ಯಾತ ಬಾಲಿವುಡ್ ಡೈರೆಕ್ಟರ್ ರಾಜಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ಸಂಜಯ್ ದತ್ ಅವರ ವೈಯಕ್ತಿಕ ಬದುಕಿನ ಹಲವಾರು ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಸಂಜಯ್ ದತ್ ಪಾತ್ರದಲ್ಲಿ ಬಾಲಿವುಡ್ ಅಂಗಳದ ಪ್ರತಿಭಾವಂತ ನಟ, ಕಪೂರ್ ವಂಶದ ಕುಡಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ರಣಬೀರ್ ಅಭಿನಯದ ಸಂಜಯ್ ಪಾತ್ರದ ಝಲಕ್ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದಾ ವಿವಾದಗಳಿಂದ ಸುತ್ತುವರೆದಿದ್ದ, ಹಲವು ಏಳು ಬೀಳುಗಳಿಂದ ಕೂಡಿದ ಸಂಜಯ್ ದತ್ ಜೀವನದ ಬಗ್ಗೆ ನಿರ್ಮಾಣಗೊಂಡಿರುವ ಈ ಸಿನೆಮಾ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಬಹುನಿರೀಕ್ಷಿತ ‘ ಸಂಜು ‘ ಚಿತ್ರ ಜೂನ್ 29 ರಂದು ಬಿಡುಗಡೆಗೊಳ್ಳಲಿದೆ.

ಟೀಸರ್ ಅನ್ನು ಒಂದೇ ದಿನದಲ್ಲಿ 2 ಮಿಲಿಯನ್ ಗಿಂತಲೂ ಹೆಚ್ಚಿನ ಜನ ವೀಕ್ಷಿಸಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com