ಸಚಿನ್ ರೆಕಾರ್ಡ್ ಮುರಿದರೆ ಕೊಹ್ಲಿಗೆ ಸಿಗಲಿದೆ ಈ ಚಾನ್ಸ್ : ವಿಶೇಷ ಆಫರ್ ನೀಡಿದ ತೆಂಡೂಲ್ಕರ್..!

ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸಮನ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿ, ಅನೇಕ ಮೈಲಿಗಲ್ಲಗಳನ್ನು ಸ್ಥಾಪಿಸಿದ್ದಾರೆ. ತೆಂಡೂಲ್ಕರ್ ಮಾಡಿದ ಸಾಧನೆ ಅಪ್ರತಿಮವಾದುದು ಎಂಬುದರಲ್ಲಿ ಎರಡು ಮಾತಿಲ್ಲ.

ಟೆಸ್ಟ್ ಹಾಗೂ ಏಕದಿನ ಮಾದರಿಗಳಲ್ಲಿ ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ ಟೆಸ್ಟ್ ನಲ್ಲಿ 51 ಹಾಗೂ ಏಕದಿನ ಪಂದ್ಯಗಳಲ್ಲಿ 49 ಸೆಂಚುರಿ ಸಿಡಿಸಿದ್ದಾರೆ.

Image result for sachin tendulkar virat kohli

ಏಕದಿನ ಪಂದ್ಯಗಳಲ್ಲಿ ಸಚಿನ್ ಅವರ 49 ಶತಕಗಳ ರೆಕಾರ್ಡ್ ಮುರಿಯುವ ಸಾಮರ್ಥ್ಯ ಇರುವುದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮಾತ್ರ ಅನಿಸುತ್ತದೆ. ವಿರಾಟ್ ಈಗಾಗಲೇ 35 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ದಾಖಲೆ ಮುರಿಯುವ ಹಾದಿಯಲ್ಲಿ ದಿನೇ ದಿನೇ ಮುನ್ನಗ್ಗುತ್ತಿರುವ ವಿರಾಟ್ ಕೊಹ್ಲಿಗೆ, ಸಚಿನ್ ತೆಂಡೂಲ್ಕರ್ ವಿಶೇಷ ಆಫರ್ ನೀಡಿದ್ದಾರೆ.

45ನೇ ಹುಟ್ಟು ಹಬ್ಬದಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಸಚಿನ್ ‘ ಒಂದು ವೇಳೆ ಕೊಹ್ಲಿ ನನ್ನ ರೆಕಾರ್ಡ್ ಮುರಿದರೆ ಆತನೊಂದಿಗೆ ನನ್ನ ಶಾಂಪೇನ್ ಅನ್ನು ಹಂಚಿಕೊಳ್ಳತ್ತೇನೆ ‘ ಎಂದು ವಿಶೇಷ ಆಫರ್ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com