Happy Birthday ಸಚಿನ್ : 45ನೇ ವಸಂತಕ್ಕೆ ಕಾಲಿಟ್ಟ ಮಾಸ್ಟರ್ ಬ್ಲಾಸ್ಟರ್

ಗಾಡ್ ಆಫ್ ಕ್ರಿಕೆಟ್ ‘ ಎಂದು ಕರೆಯಲ್ಪಡುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಂಗಳವಾರ 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಸಚಿನ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿವೆ.

1973 ಏಪ್ರಿಲ್ 24 ರಂದು ರಮೇಶ್ ತೆಂಡೂಲ್ಕರ್ ಮತ್ತು ರಜಿನಿ ದಂಪತಿಗಳ ಮಗನಾಗಿ ಮುಂಬೈನಲ್ಲಿ ಜನಿಸಿದರು.ಅಗಾಧ ಪ್ರತಿಭೆಯನ್ನು ಹೊಂದಿದ್ದ ಸಚಿನ್ ತನ್ನ 16ರ ಎಳೆ ವಯಸ್ಸಿನಲ್ಲಿಯೇ ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.

Image result for sachin tendulkar kid

ಶೇನ್ ವಾರ್ನ್, ಗ್ಲೆನ್ ಮೆಗ್ರಾತ್, ವಾಸಿಮ್ ಅಕ್ರಮ್, ಇಮ್ರಾನ್ ಖಾನ್, ಕರ್ಟ್ಲೀ ವಾಲ್ಷ್ ರಂತಹ ದೈತ್ಯರನ್ನು ಎದುರಿಸಿ ಸೈ ಎನಿಸಿಕೊಂಡ ಸಚಿನ್ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತ ಸಾಗಿದರು. ಕ್ರಿಕೆಟ್ ಇತಿಹಾಸದಲ್ಲಿ 100 ಸೆಂಚುರಿಗಳನ್ನು ಬಾರಿಸಿದ ಮೊದಲ ಆಟಗಾರನೆಂಬ ಖ್ಯಾತಿಗೆ ಪಾತ್ರರಾದ ಸಚಿನ್, ಟೆಸ್ಟ್ ಹಾಗೂ ಏಕದಿನ ಎರಡೂ ಮಾದರಿಯ ಕ್ರಿಕೆಟ್ ನಲ್ಲಿ ಗರಿಷ್ಟ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.

Image result for sachin tendulkar kid

ತೆಂಡೂಲ್ಕರ್ ಬಾರಿಸುತ್ತಿದ್ದ ಸ್ಟ್ರೇಟ್ ಡ್ರೈವ್, ಕಟ್ ಶಾಟ್, ಲೆಗ್ ಫ್ಲಿಕ್, ಕವರ್ ಡ್ರೈವ್, ಆನ್ ಡ್ರೈವ್, ಸ್ವೀಪ್ ಮುಂತಾದ ಹೊಡೆತಗಳು ಮೋಹಕವಾಗಿರುತ್ತಿದ್ದವು. ಆಸ್ಟ್ರೇಲಿಯಾದ ಮಾಜಿ ಆಟಗಾರ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರೂ ಸಚಿನ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. 2013 ರಲ್ಲಿ ಮುಂಬೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿಗೆ ಆಡಿದ ಸಚಿನ್ 24 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು.

Image result for sachin tendulkar

ಮಾಸ್ಟರ್ ಬ್ಲಾಸ್ಟರ್ ಸಾಧನೆಯನ್ನು ಅರಸಿಕೊಂಡು ಭಾರತ ರತ್ನ, ಅರ್ಜುನ, ಪದ್ಮಶ್ರೀ, ಪದ್ಮಭೂಷಣ, ರಾಜೀವ್ ಗಾಂಧಿ ಖೇಲ್ ರತ್ನ, ವಿಸ್ಡನ್ ವರ್ಷದ ಕ್ರಿಕೆಟರ್, ಗ್ಯಾರಿ  ಫೀಲ್ಡ್ ಸೋಬರ್ಸ್ ಪ್ರಶಸ್ತಿಗಳ ಸಂದಿವೆ.

Leave a Reply

Your email address will not be published.