ಹೃದಯದ ಶಸ್ತ್ರ ಚಿಕಿತ್ಸೆಗಾಗಿ ಭಾರತದ ನೆರವು ಯಾಚಿಸಿದ ಪಾಕ್ ಹಾಕಿ ಆಟಗಾರ

ಪಾಕಿಸ್ತಾನ ಹಾಕಿ ತಂಡದ ಮಾಜಿ ಆಟಗಾರ ಮನ್ಸೂರ್ ಅಹ್ಮದ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರಿಗೆ ಶೀಘ್ರವೇ ಹೃದಯದ ಕಸಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಭಾರತದಲ್ಲಿ ಶಸ್ತ್ರ ಚಿಕಿತ್ಸೆ ಪಡೆಯಲು ಬಯಸಿರುವ ಮನ್ಸೂರ್ ಅಹ್ಮದ್, ಭಾರತ ಸರ್ಕಾರದಿಂದ ನೆರವಿನ ಹಸ್ತವನ್ನು ಯಾಚಿಸಿದ್ದಾರೆ.

Image result for mansoor ahmed hockey heart

ಸಹಾಯ ಯಾಚಿಸಿರುವ ಮನ್ಸೂರ್ ಅಹ್ಮದ್ ‘ ಮೈದಾನದಲ್ಲಿ ಹಾಕಿ ಆಡುವಾಗ ನಾನು ಭಾರತೀಯ ಅಭಿಮಾನಿಗಳ ಮನಸಿಗೆ ಘಾಸಿಯುಂಟು ಮಾಡಿರಬಹುದು. ಆದರೆ ಅದು ಆಟವಷ್ಟೇ. ನಾನೀಗ ಭಾರತದಲ್ಲಿ ಹೃದಯಸ ಕಸಿ ಶಸ್ತ್ರ ಚಿಕಿತ್ಸೆ ಪಡೆಯಲು ಬಯಸಿದ್ದೇನೆ, ಅದಕ್ಕಾಗಿ ಭಾರತ ಸರ್ಕಾರದ ನೆರವಿನ ಅಗತ್ಯವಿದೆ ‘ ಎಂದಿದ್ದಾರೆ.

‘ ಮನುಷ್ಯತ್ವ ಎಂಬುದು ಎಲ್ಲಕ್ಕಿಂತ ಮಿಗಿಲಾದ್ದಾಗಿದೆ. ಶಸ್ತ್ರ ಚಿಕಿತ್ಸೆ ನಡೆಯಲು ಭಾರತದ ವೀಸಾ ಹಾಗೂ ಇನ್ನಿತರ ಸಹಾಯ ದೊರೆಯುವ ನಿರೀಕ್ಷೆಯಿದೆ ‘ ಎಂದು ಮನ್ಸೂರ್ ಹೇಳಿದ್ದಾರೆ. ಗೋಲ್ ಕೀಪರ್ ಆಗಿದ್ದ ಮನ್ಸೂರ್ ಅಹ್ಮದ್, 1994 ರಲ್ಲಿ ವಿಶ್ವಕಪ್ ಗೆದ್ದ ಪಾಕಿಸ್ತಾನ ಹಾಕಿ ತಂಡದ ಸದಸ್ಯರಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com