ಗೊಂದಲಕ್ಕೆ ತೆರೆ :ವರುಣಾದಲ್ಲಿ JDS ನಿಂದ ಅಭಿಶೇಕ್‌, BJP ಯಿಂದ ಬಸವರಾಜಪ್ಪ ಸ್ಪರ್ಧೆ ಖಚಿತ

ಮೈಸೂರು : ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರದ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದ್ದು, ಸೋಮವಾರ ಬಿಜೆಪಿಯಿಂದ ವಿಜಯೇಂದ್ರ ಸ್ಪರ್ಧೆ ಮಾಡುತ್ತಿಲ್ಲ ಎಂದು ಖಾತ್ರಿಯಾದ ಬಳಿಕ ಜೆಡಿಎಸ್‌, ಹಾಗೂ ಬಿಜೆಪಿ ಅಭ್ಯರ್ಥಿಗಳ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತು.

ಇಂದು ಬೆಳಗ್ಗೆಯಷ್ಟೇ ಜೆಡಿಎಸ್‌ನಿಂದ ಜಿ.ಟಿ ದೇವೇಗೌಡರ ಪುತ್ರ ಹರೀಶ್ ಗೌಡ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿದ್ದು, ಆದರೆ ಈಗ ಈ ಹಿಂದೆ ಹೆಸರು ಘೋಷಿಸಿದ್ದ ಅಭ್ಯರ್ಥಿ ಅಭಿಶೇಕ್‌ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಇದೇ ಕ್ಷೇತ್ರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಿತ್ತು. ನಿನ್ನೆಯಷ್ಟೆ ಅಭ್ಯರ್ಥಿಯನ್ನು ಬದಲಿಸಿತ್ತು. ಬಿಜೆಪಿಯಲ್ಲೂ ಇಂದು ಮಹತ್ವದ ಬೆಳವಣಿಗೆ ಜರುಗಿದ್ದು, ಕೊನೆಗೂ ವಿಜಯೇಂದ್ರ ಅವರ ಸ್ಥಾನಕ್ಕೆ ಬಸವರಾಜಪ್ಪ ಅವರನ್ನು ನಿಲ್ಲಿಸಿದ್ದು, ಇಂದು ಅವರೂ ನಾಮಪತ್ರ ಸಲ್ಲಿಸಿದ್ದಾರೆ.

ಮತ್ತೊಂದೆಡೆ ಮಂಡ್ಯದಲ್ಲಿ ಅಂಬರೀಶ್‌ ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ರವಿ ಗಾಣಿಗ ಕಣಕ್ಕಿಳಿದಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com