ಯತೀಂದ್ರರನ್ನು ಸೋಲಿಸಲು ಜೆಡಿಎಸ್‌, ಬಿಜೆಪಿ ಪಣ : ವಿಜಯೇಂದ್ರ ಬದಲು ಹರೀಶ್ ಗೌಡ ಕಣಕ್ಕೆ

ಮೈಸೂರು : ವರುಣಾ ಕ್ಷೇತ್ರ ಚಾಮುಂಡೇಶ್ವರಿಯತೆ ಹೈವೋಲ್ಟೇಜ್‌ ಕ್ಷೇತ್ರವಾಗಿದ್ದು, ಬಿಜೆಪಿ ಅಂತಿಮ ಹೊತ್ತಿನಲ್ಲಿ ವಿಜಯೇಂದ್ರ ಅವರನ್ನು ಕಣದಿಂದ ವಾಪಸ್‌ ಕರೆಸಿಕೊಂಡಿದೆ. ಇದೇ ಸಂದರ್ಭದಲ್ಲಿ ಜೆಡಿಎಸ್‌ ಸಹ ತನ್ನ ಅಭ್ಯರ್ಥಿಯನ್ನು ಬದಲಿಸಿದ್ದು, ಕಾಂಗ್ರೆಸ್‌ ಅಭ್ಯರ್ಖಿ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರನ್ನು ಸೋಲಿಸಲು ಜೆಡಿಎಸ್‌ ಹಾಗೂ ಬಿಜೆಪಿ ಜಂಟಿಯಾಗಿ ಯೋಜನೆ ಹಾಕಿಕೊಂಡು ಈ ಯೋಜನೆ ಹಾಕಿಕೊಂಡಿರುವುದಾಗಿ ಹೇಳಲಾಗುತ್ತಿದೆ.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಜಿ.ಟಿ ದೇವೇಗೌಡರು ಕಣಕ್ಕಿಳಿದಿದ್ದು, ವರುಣಾದಲ್ಲಿ ಅವರ ಪುತ್ರ ಹರೀಶ್ ಗೌಡ ಅವರನ್ನು ಕಣಕ್ಕಿಳಿಸಲಾಗಿದೆ.  ಈ ಹಿಂದೆ, ಅಭಿಷೇಕ್ ಅವರಿಗೆ ಜೆಡಿಎಸ್ ಟಿಕೆಟ್​ ಪ್ರಾಪ್ತಿಯಾಗಿತ್ತು. ಆದರೆ ಈಗ ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ಹರೀಶ್ ಗೌಡ ಅವರು ಕಣಕ್ಕಿಳಿದಿದ್ದಾರೆ.

ಅಂದಹಾಗೆ, ಹರೀಶ್​ ಈ ಹಿಂದೆ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದರು. ಸದ್ಯ ಈ ಕುರಿತು ಮೈಸೂರಿನಲ್ಲಿ ಜಿಟಿಡಿ ನಿವಾಸದಲ್ಲಿ ಗಂಭೀರ ಚರ್ಚೆ ನಡೆದ ಬಳಿಕ ಹರೀಶ್ ಗೌಡರನ್ನು ವರುಣಾದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com