U.P ಸೇರಿದಂತೆ ಐದು ರಾಜ್ಯಗಳಿಂದ ದೇಶದ ಅಭಿವೃದ್ಧಿ ಕುಂಠಿತವಾಗ್ತಿದೆ : ನೀತಿ ಆಯೋಗ ಮುಖ್ಯಸ್ಥ

ದೆಹಲಿ : ಉತ್ತರ ಪ್ರದೇಶ. ಛತ್ತೀಸ್‌ಗಢ, ಬಿಹಾರ, ರಾಜಸ್ಥಾನ ಹಾಗೂ ಮಧ್ಯ ಪ್ರದೇಶಗಳಿಂದಾಗಿ ಭಾರತದ ಸಾಮಾಜಿಕ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ನೀತಿ ಆಯೋಗದ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.
ದೆಹಲಿಯ ಜಾಮಿಯಾ ಇಸ್ಲಾಮಿಯಾ ವಿವಿಯಲ್ಲಿ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ  ನೀತಿ ಆಯೋಗದ ಮುಖ್ಯಸ್ಥ ಅಮಿತಾಬ್‌ ಕಾಂತ್‌, ಭಾರತ ಹಿಂದುಳಿದಿರುವಿಕೆಗೆ ಪೂರ್ವದ ಐದು ರಾಜ್ಯಗಳೇ ಮುಖ್ಯ ಕಾರಣ ಎಂದಿದ್ದಾರೆ.
ಸಾಮಾಜಿಕ ಅಭಿವೃದ್ಧಿಯಾಗುವಲ್ಲಿ ಈ ಐದು ರಾಜ್ಯಗಳು ತೊಡಕುಂಟುಮಾಡುತ್ತಿವೆ. ಭಾರತದ ಉದ್ಯಮ ಸೇರಿದಂತೆ ಆರ್ಥಿಕ ರಂಗದಲ್ಲೂ ಭಾರತ ಪ್ರಗತಿ ತೋರಿದೆ. ಆದರೆ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದ್ದು 188ರಾಷ್ಟ್ರಗಳ ಪೈಕಿ 131ನೇ ಸ್ಥಾನದಲ್ಲಿದೆ ಎಂದಿದ್ದಾರೆ.
ಅಲ್ಲದೆ ದಕ್ಷಿಣ ಮತ್ತು ಪಶ್ಚಿಮ ಭಾರತದ ರಾಜ್ಯಗಳು ಉತ್ತಮ ಫಲಿತಾಂಶ ನೀಡುತ್ತಿವೆ. ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿವೆ. ಹೀಗಾಗಿ ದೇಶ ಮಾನವ ಅಭಿವೃದ್ಧಿ ಸೂಚ್ಯಂಕದ ಸುಧಾರಣೆಯ ಕುರಿತು ಹೆಚ್ಚು ಗಮನ ಹರಿಸಬೇಕಿದೆ. ಶಿಕ್ಷಣ ಮತ್ತು ಆರೋಗ್ಯ ಪ್ರಮುಖ ವಿಚಾರಗಳಾಗಿದ್ದು, ಈ ಸಂಗತಿಗಳಲ್ಲೇ ಭಾರತ ಹೆಚ್ಚು ಹಿಂದುಳಿಯುತ್ತಿದೆ. ಶಿಕ್ಷಣ ವ್ಯವಸ್ಥೆ ಉತ್ತಮಗೊಳ್ಳಲು ಶ್ರಮಿಸಬೇಕಿದೆ. ಐದನೇ ತರಗತಿ ಬಾಲಕ ತನ್ನ ಮಾತೃಭಾಷೆಯ ಪಠ್ಯ ಪುಸ್ತಕವನ್ನೇ ಓದಲು ಪರದಾಡುತ್ತಾನೆ. ಶಿಶು ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com