ನಟಿ ತನಿಷ್ಕಾ ಕಪೂರ್ ಜೊತೆ ಚಹಲ್ ಡೇಟಿಂಗ್.? : ಟ್ವೀಟ್ ಮಾಡಿ RCB ಬೌಲರ್ ಹೇಳಿದ್ದೇನು..?

ಸೆಲೆಬ್ರಿಟಿಗಳ ಬಗ್ಗೆ ರೂಮರ್, ಗಾಸಿಪ್ ನಂತಹ ಗಾಳಿ ಸುದ್ದಿಗಳು ಹುಟ್ಟಿಕೊಳ್ಳುವುದು ಸರ್ವೇ ಸಾಮಾನ್ಯ. ಒಮ್ಮೊಮ್ಮೆ ಇವು ನಿಜವಾಗಿರುತ್ತವೆ, ಆದರೆ ಒಮ್ಮೊಮ್ಮೆ ಯಾವುದೇ ಅಧಿಕೃತ ಆಧಾರವಿಲ್ಲದ ಸುದ್ದಿಗಳು ಎಲ್ಲಿಲ್ಲದ ಪ್ರಚಾರ ಪಡೆದುಕೊಂಡಿರುತ್ತವೆ.

ನಮ್ಮ ದೇಶದಲ್ಲಿ ಕ್ರಿಕೆಟ್ ಹಾಗೂ ಸಿನೆಮಾ ರಂಗಕ್ಕೂ ವಿಶೇಷ ನಂಟು. ಕ್ರಿಕೆಟ್ ಆಟಗಾರರು ಮತ್ತು ಚಿತ್ರನಟಿಯರು ಡೇಟಿಂಗ್ ಮಾಡುತ್ತಿರುವ ಸುದ್ದಿಗಳು ಮಾಧ್ಯಮಗಳಲ್ಲಿ ಆಗಾಗ ಕೇಳಿ ಬರುತ್ತಿರುತ್ತವೆ.

ಈ ಲಿಸ್ಟ್ ಗೆ ಹೊಸ ಸೇರ್ಪಡೆ ಆರ್ ಸಿಬಿ ಲೆಗ್ ಸ್ಪಿನ್ನರ್ ಯಜುವೇಂದ್ರ ಸಿಂಗ್ ಚಹಲ್. ಹೌದು, ಚಹಲ್ ಹಾಗೂ ನಟಿ ತನಿಷ್ಕಾ ಸಿಂಗ್ ಡೇಟಿಂಗ್ ನಡೆಸಿದ್ದಾರೆ ಇನ್ನೇನು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೆಲವು ದಿನಗಳಿಂದ ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚಹಲ್ ಸ್ಪಷ್ಟನೆ ನೀಡಿದ್ದಾರೆ.

ಟ್ವೀಟ್ ಮಾಡಿರುವ ಚಹಲ್, ‘ ಹೆಲೋ, ನನ್ನು ಜೀವನದಲ್ಲಿ ಅಂತಹ ವಿಶೇಷವಾದದ್ದೇನೂ ನಡೆಯುತ್ತಿಲ್ಲ. ನಾನು ಮದುವೆಯಾಗುತ್ತಿಲ್ಲ, ತನಿಷ್ಕಾ ಮತ್ತು ನಾನು ಒಳ್ಳೆಯ ಸ್ನೇಹಿತರಷ್ಟೇ. ಮೀಡಿಯಾದವರಿಗೆ ಹಾಗೂ ಅಭಿಮಾನಿಗಳಲ್ಲಿ ನನ್ನ ವಿನಂತಿ ಏನೆಂದರೆ ಇಂತಹ ಸುದ್ದಿಗಳನ್ನು, ರೂಮರ್ ಗಳನ್ನು ಹಬ್ಬಿಸಬೇಡಿ. ನನ್ನ ಖಾಸಗಿ ಬದುಕನ್ನು ನೀವು ಗೌರವಿಸುತ್ತೀರಿ ಅಂದುಕೊಂಡಿದ್ದೇನೆ. ನಿರಾಧಾರವಾಗಿರುವ ನನ್ನ ಮದುವೆ ಸುದ್ದಿ ಕುರಿತಾಗಿ ಪೋಸ್ಟ್ ಮಾಡಬೇಡಿ ‘ ಎಂದು ಕೇಳಿಕೊಂಡಿದ್ದಾರೆ.

Leave a Reply

Your email address will not be published.