ಒಂದು ಟಿಕೆಟ್ ಕೊಡ್ಸಕ್ಕಾಗಲ್ಲ ಅಂದ್ರೆ ನೀವೆಂಥ ನಾಯಕ : ಕೈ ಮುಖಂಡನಿಗೆ ಕಾರ್ಯಕರ್ತರ ತರಾಟೆ

ಬೀದರ್‌ : ಮಾಜಿ ಸಿಎಂ ದಿ. ಧರಂಸಿಂಗ್ ಪುತ್ರ ವಿಧಾನಪರಿಷತ್ ಶಾಸಕ ವಿಜಯಸಿಂಗ್ ರನ್ನು ಕಾಂಗ್ರೆಸ್‌ ಕಾರ್ಯಕರ್ತರು ಗೃಹ ಬಂಧನದಲ್ಲಿಟ್ಟ ಘಟನೆ  ನಡೆದಿದೆ.

ಬೀದರ್ ಜಿಲ್ಲೆಯ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದಿಂದ ಸಿಎಂ ಅಧೀನ ಕಾರ್ಯದರ್ಶಿಯಾಗಿದ್ದ ಭೀಮಸೇನ್ ಸಿಂಧೆ ಗೆ ಟಿಕೆಟ್ ಕೈ ತಪ್ಪುವಲ್ಲಿ ಬಿಜೆಪಿ ಜತೆಗಿನ ಒಳ ಒಪ್ಪಂದವೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾವಿರಾರು ಕಾರ್ಯಕರ್ತರು ವಿಜಯಸಿಂಗ್ ಅವರ ಮೇಲೆ ಹರಿಹಾಯ್ದರು. ಒಂದು ಟಿಕೆಟ್ ಕೊಡಿಸಲಾಗದ ನಿವು ನಮ್ಮ ಕ್ಷೇತ್ರದಲ್ಲಿ ಕಾಲಿಡಬೇಡಿ… ನಮ್ಮಲ್ಲಿ ಆಸೆ ಹುಟ್ಟಿಸಿ ದ್ರೋಹ ಮಾಡಿದ್ದೀರಿ ಎಂದು ಭೀಮಸೇನ ಸಿಂಧೆ ನಿವಾಸಕ್ಕೆ ಭೇಟಿ ನೀಡಿದ ವಿಜಯಸಿಂಗ್ ಅವರ ಬೆವರು ಇಳಿಸಿ ವಿಜಯಸಿಂಗ್ ಗೆ ಧಿಕ್ಕಾರ ಕೂಗಿದ್ದಲ್ಲದೆ ಎರಡು ಗಂಟೆ ಗೃಹ ಬಂಧನದಲ್ಲಿಟ್ಟಿದ್ದರು.

ಪರಿಸ್ಥಿತಿ ನಿಯಂತ್ರಣ ತಪ್ಪುವುದನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ  ಸೇನಾ ಪಡೆಯ ತುಕಡಿಯನ್ನು ಕರೆಯಿಸಿ ವಿಜಯಸಿಂಗ್ ಅವರನ್ನು ಸುರಕ್ಷಿತವಾಗಿ ಹೊರ ಕರೆತಂದಿದ್ದಾರೆ. ಸಾವಿರಾರು ಕಾರ್ಯಕರ್ತರು ಭೀಮಸೇನ ಸಿಂಧೆ ಅವರಿಗೆ ಪಕ್ಷೇತರರಾಗಿ ನಿಲ್ಲುವಂತೆ ಹೇಳಿದ್ರು ಇದಕ್ಕೆ ಸಿಂಧೆ ಒಪ್ಪಲಿಲ್ಲ ಹೀಗಾಗಿ ಜನರ ಆಕ್ರೋಶ ಮುಗಿಲು ಮುಟ್ಟಿ ಸಿಂಧೆ ಮೇಲೂ ಕೆಂಡ ಕಾರಿ ನಿಮ್ಮಂಥ ನಾಯಕರು ನಮಗೆ ಬೇಕಾಗಿಲ್ಲ ತೊಲಗಿ ಇಲ್ಲಿಂದ ಎಂದು ಅವಮಾನ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com