ವರನಟನ ಹುಟ್ಟುಹಬ್ಬಕ್ಕೆ ನೀತಿ ಸಂಹಿತೆ ಅಡ್ಡಿ : ಅಣ್ಣಾವ್ರ ಪುತ್ಥಳಿ ಎದುರು ಸಪ್ತಪದಿ ತುಳಿದ ಅಭಿಮಾನಿ

ಬೆಂಗಳೂರು : ಇಂದು ನಟಸಾರ್ವಭೌಮ, ವರನಟ ಡಾ. ರಾಜ್‌ ಕುಮಾರ್‌ ಅವರ 90ನೇ ಜನ್ಮದಿನವಾಗಿದ್ದು, ಪ್ರತೀ ವರ್ಷದಂತೆ ಈ ಬಾರಿಯೂ ಅಭಿಮಾನಿಗಳು ರಾಜ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಈ ಬಾರಿ ರಾಜ್‌ ಹುಟ್ಟುಹಬ್ಬದ ಅಂಗವಾಗಿ ಅಣ್ಣಾವ್ರ ಮಕ್ಕಳಾದ ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌, ಪುನೀತ್ ರಾಜ್‌ ಕುಮಾರ್‌ ಸೇರಿದಂತೆ ರಾಜ್‌ ಕುಟುಂಬಸ್ಥರೆಲ್ಲರೂ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ ಕುಮಾರ್ ಅವರ  ಸಮಾಧಿಗೆ ಪೂಜೆ ಸಲ್ಲಿಸಿದರು.

ಇದೇ ವೇಳೆ ಸಾವಿರಾರು ಮಂದಿ ರಾಜ್‌ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರಾಜ್‌ ಸಮಾಧಿಗೆ ಕೈ ಮುಗಿದು ನಮನ ಸಲ್ಲಿಸಿದರು. ಪ್ರತೀ ವರ್ಷ ಅಣ್ಣಾವ್ರ ಹುಟ್ಟುಹಬ್ಬದಂದು ರಕ್ತದಾನ, ನೇತ್ರದಾನದಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ನೀತಿ  ಸಂಹಿತೆ ಜಾರಿಯಲ್ಲಿರುವ ಕಾರಣ ಯಾವ ಶಿಬಿರಗಳೂ ನಡೆದಿಲ್ಲ.

ಅಲ್ಲದೆ ರಾಜ್‌ ಕುಮಾರ್‌ ಹುಟ್ಟುಹಬ್ಬದಂದೇ ರುಸ್ತುಂ ಸಿನಿಮಾ ಸೆಟ್ಟೇರಿದೆ. ಜೊತೆಗೆ ರಾಜ್‌ ಹುಟ್ಟುಹಬ್ಬದ ದಿನದಂದೇ ಅಣ್ಣಾವ್ರ ಅಭಿಮಾನಿ ರುದ್ರ ಎಂಬುವವರು ವಿವಾಹವಾಗಿದ್ದಾರೆ. ಕುರುಬರಹಳ್ಳಿ ಬಳಿ ಇರುವ ರಾಜ್‌ ಪುತ್ಥಳಿ ಬಳಿ ವಿವಾಹ ನಡೆದಿದೆ.

 

Leave a Reply

Your email address will not be published.