ಸಿದ್ದರಾಮಯ್ಯ ಆಪ್ತ ಮಹದೇವಪ್ಪಗೆ ಐಟಿ ಶಾಕ್‌ : ದಾಳಿ ಬಗ್ಗೆ CM ಹೇಳಿದ್ದು ಹೀಗೆ….

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಚಿವ ಎಚ್.ಸಿ ಮಹದೇವಪ್ಪ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಜಯನಗರದಲ್ಲಿರುವ ಮಹದೇವಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು ಪರಿಶೀಲನೆ ನಡೆಸಲಾಗುತ್ತಿದೆ.

ಚುನಾವಣೆಯ ಹೊತ್ತಿನಲ್ಲಿ ಟಿ ನರಸೀಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಹೆಚ್.ಸಿ.ಮಹದೇವಪ್ಪ ಅವರ ಮನೆಯ ಮೇಲಿನ ಐಟಿ ದಾಳಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಇದು ಕೇಂದ್ರದ ಹುನ್ನಾರ, ಇದನ್ನ ನಾನು ತೀವ್ರವಾಗಿ ಖಂಡಿಸುತ್ತೆನೆ. ಕೇಂದ್ರ ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ನಮ್ಮ ಪಕ್ಷದ ನಾಯಕರನ್ನು ತೊಂದರೆಗೀಡು ಮಾಡುತ್ತಿದ್ದಾರೆ. ಐಟಿಯವರು ಯಾಕೆ ಬಿಎಸ್‍ವೈ ಹಾಗೂ ಶೆಟ್ಟರ್ ಮನೆ ಮೇಲೆ ದಾಳಿ ಮಾಡುತ್ತಿಲ್ಲ. ಅವರ ಕಣ್ಣಿಗೆ ಕೇವಲ ಕಾಂಗ್ರೆಸ್‌ನವರೇ ಕಾಣಿಸುತ್ತಿರುವುದಾ. ಇದು ಕೇಂದ್ರದ ನೀಚ ಕೃತ್ಯ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com