ನಿಮ್ಮ ಮಗನಿಗಿಂತ ನಮಗೆ ಪಕ್ಷ ಮುಖ್ಯ ,ಅದಕ್ಕಾಗಿ ಕೆಲಸ ಮಾಡಿ : BSY ಗೆ ಶಾ ಖಡಕ್‌ ಸೂಚನೆ

ಬೆಂಗಳೂರು : ನಿಮ್ಮ ಮಗನಿಗಿಂತ ನಮಗೆ ಬಿಜೆಪಿ ಪಕ್ಷವೇ ಮುಖ್ಯ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ನಿಮ್ಮ ಮಗನಿಗೆ ಇನ್ನೂ ಭವಿಷ್ಯವಿದೆ, ಪಕ್ಷದಲ್ಲೇ ಕೆಲಸ ಮಾಡಲಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ  ಬಿಎಸ್‌ವೈಗೆ ಖಡಕ್ ಸೂಚನೆ ನೀಡಿದ್ದಾರೆ.

ವಿಜಯೇಂದ್ರ ಅವರಿಗೆ ವರುಣಾದಲ್ಲಿ  ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಮಿತ್ ಶಾ, ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದು, ನಮಗೆ ಪಕ್ಷ ಅಧಿಕಾರಕ್ಕೆ ಬರಬೇಕು. ನೀವು ಸಿಎಂ ಆಗಬೇಕು ಅಷ್ಟೇ. ಅದೇ ನಮ್ಮ ಉದ್ದೇಶ. ನಿಮ್ಮ ಮಗನ ಬಗ್ಗೆ ತಲೆಕೆಡಿಸಿಕೊಳ್ಳಲು ಸಾಧ್ಯವಿಲ್ಲ. ಸಮಯ ಬಂದಾಗ ಕೆಲಸಕ್ಕೆ ತಕ್ಕ ಫಲ ಸಿಗುತ್ತದೆ ಎಂದು ಶಾ, ಬಿಎಸ್‌ವೈಗೆ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published.