ವಿಜಯೇಂದ್ರನಿಗೆ ವರುಣಾದಲ್ಲಿ ಸ್ಪರ್ಧೆ ಮಾಡದಿರುವಂತೆ ಹೇಳಿದ್ದು ನಾನೇ : ಯಡಿಯೂರಪ್ಪ

ಮೈಸೂರು : ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ನಿಲ್ಲುವುದು ಬೇಡ ಎಂದು ನಾನೇ ಹೇಳಿದ್ದು, ಇದರಲ್ಲಿ ಕೇಂದ್ರ ನಾಯಕರ ಪಾತ್ರವಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಪ್ರವಾಸ ಮಾಡುವಂತೆ  ವಿಜಯೇಂದ್ರಗೆ ಹೇಳಿದ್ದೆ. ಆದರೆ ಕೇವಲ 15 ದಿನದಲ್ಲಿ ವಿಜಯೇಂದ್ರ ಕ್ಷೇತ್ರದ ಜನರ ಪ್ರೀತಿ ಗಳಿಸಿದ್ದು ನೋಡಿ ನನ್ನ ತೀರ್ಮಾನ ಬದಲಿಸಿದ್ದೇನೆ. ವಿಜಯೇಂದ್ರ ಅವರ ಸೇವೆ ಮೈಸೂರು ಭಾಗಕ್ಕೆ ಅಗತ್ಯವಿದೆ. ಆದ್ದರಿಂದ ಮೈಸೂರಿನ ಎಲ್ಲಾ ಭಾಗಗಳಲ್ಲೂ ಸೇವೆ ಸಲ್ಲಿಸುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಈಗಾಗಲೆ ನಾನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇದರಲ್ಲಿ ಕೇಂದ್ರದ ನಾಯಕರ ನಿರ್ಧಾರ ಇಲ್ಲ. ವರುಣಾದಲ್ಲಿ ಯಡಿಯೂರಪ್ಪ, ವಿಜಯೇಂದ್ರರೇ ಅಭ್ಯರ್ಥಿಗಳು ಎಂದುಕೊಂಡು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com