ಯಾರೋ ಬರೆದುಕೊಟ್ಟಿದ್ದನ್ನು ಓದೋ ರಾಹುಲ್‌ ಗಾಂಧಿಗೆ ಮೆಚ್ಯುರಿಟಿ ಇಲ್ಲ : HDK

ಮೈಸೂರು : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪೊಲಿಟಿಕಲ್ ಮೆಚ್ಯೂರಿಟಿ ಇಲ್ಲ. ಯಾರೋ ಬರೆದುಕೊಟ್ಟಿದ್ದನ್ನು ತೆಗೆದುಕೊಂಡು ಬಂದು ಓದಿ ಹೋಗ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಸರ್ಕಾರ ಯಾರದ್ದು ಎಂದು ಯಾರಿಗೂ ಗೊತ್ತಿಲ್ಲ. ಚುನಾವಣೆಗಾಗಿ ಸಿಎಂ ಈಗಾಗಲೇ ಬಹಳಷ್ಟು ಟೆಂಡರ್‌ಗಳ ಆರ್ಡರ್‌ನಿಂದಾಗಿ ಹಣ ಸಂಗ್ರಹಿಸಿದ್ದಾರೆ. ಒಂದು ವೇಳೆ ಅವರೇ ಅಧಿಕಾರಕ್ಕೆ ಬಂದರೂ ನಿರ್ವಹಣೆ ಮಾಡದಷ್ಟೂ ಆಡಳಿತ ವ್ಯವಸ್ಥೆಯನ್ನು ಕೆಡಿಸಿದ್ದಾರೆ. ಯಾರೇ ಅಧಿಕಾರಕ್ಕೆ ಬಂದರೂ ಆಡಳಿತ ನಡೆಸುವುದಕ್ಕೆ ಆಗದಷ್ಟು ವ್ಯವಸ್ಥೆ ಕೆಟ್ಟಿದೆ ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವರದು ನುಡಿದಂತೆ ನಡೆದ ಸರ್ಕಾರ ಅಲ್ಲ, ಕಾಂಗ್ರೆಸ್‍ನದ್ದು ನುಡಿದಂತೆ ನಡೆಯದ ಸರ್ಕಾರ. ಅವರ ಆಡಳಿತವಾಧಿಯಲ್ಲಿ ಎಷ್ಟು ಲೂಟಿ ಮಾಡಬೇಕೆಂದು ಪ್ಲಾನ್ ಮಾಡಿದ್ದರೋ ಅಷ್ಟೂ ಹಣವನ್ನು ದೋಚಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com