ಈ ಸಲ ಕಪ್‌ ನಮ್ದೇ ಗುರು ಎಂದ ಪಂಜಾಬ್‌ ತಂಡದ ಕನ್ನಡದ ಹುಡುಗ್ರು : ವಿಡಿಯೋ ವೈರಲ್

ಮೊಹಾಲಿ : ಐಪಿಎಲ್‌ ಪ್ರಾರಂಭವಾಗುವುದಕ್ಕೂ ಮೊದಲಿನಿಂದ ಆರ್‌ಸಿಬಿ ಅಭಿಮಾನಿಗಳು ಈ ಸಲ ಕಪ್‌ ನಮ್ದೇ ಎಂದು ಹೇಳುತ್ತಾ ಆರ್‌ಸಿಬಿಗೆ ೆಬೆಂಬಲ ನೀಡುತ್ತಲೇ ಬಂದಿದ್ದಾರೆ.
ಆದರೆ ಈಗ ಕಿಂಗ್ಲ್‌ ಇಲೆವೆನ್‌ ತಂಡದ ಪರ ಆಡುತ್ತಿರುವ ಕನ್ನಡಿಗರಾದ ಕೆ.ಎಲ್‌ ರಾಹುಲ್‌ ಹಾಗೂ ಕರುಣ್ ನಾಯರ್‌ ಅವರ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಮೂರು ದಿನಗಳ ಹಿಂದೆ ಕೆಕೆಆರ್‌ ವಿರುದ್ಧ 9 ವಿಕೆಟ್‌ಗಳಿಂದ ಗೆದ್ದ ಪಂಜಾಬ್‌ ತಂಡದವರು ಡ್ರೆಸ್ಸಿಂಗ್‌ ರೂಂನಲ್ಲಿ ಸಂಭ್ರಮಾಚರಣೆ   ನಡೆಸಿದ್ದಾರೆ. ಈ ವೇಳೆ ಕರುಣ್ ನಾಯರ್‌ ಹಾಗೂ ರಾಹುಲ್‌ ವಿಡಿಯೋ ಮಾಡಿದ್ದು, ರಾಹುಲ್‌ ಈ ಸಲ ಕಪ್‌ ನಮ್ದೇ ಗುರು, ಎಲ್ರಿಗೂ ಹೇಳ್ಬಿಡು ಎಂದಿದ್ದಾರೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಕೆಲವರು ಕನ್ನಡಿಗರು ಹೆಚ್ಚಿರುವ ಪಂಜಾಬ್‌ ತಂಡಕ್ಕೆ ಶುಭ ಕೋರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com