5 ರೂಪಾಯಿಯ ನಾಣ್ಯಗಳನ್ನು ಠೇವಣಿ ಇಟ್ಟು ನಾಮಪತ್ರ ಸಲ್ಲಿಸಿದ 5 ರೂಪಾಯಿ ಡಾಕ್ಟರ್‌ !

ಮಂಡ್ಯ : ಸೋಮವಾರ ಮಂಡ್ಯದಲ್ಲಿ ಐದು ರೂಪಾಯಿ ವೈದ್ಯರು ಎಂದೇ ಖ್ಯಾತರಾಗಿರುವ ಡಾ. ಶಂಕರೇಗೌಡರು ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಂಕರೇಗೌಡರು, ಐದು ರೂ ವೈದ್ಯ ಎಂದೇ ಹೆಸರುವಾಸಿಯಾಗಿ, ಚಿಕಿತ್ಸೆಗಾಗಿ ಪಡೆದಿದ್ದ ಐದು ರೂಪಾಯಿ ನಾಣ್ಯಗಳನ್ನೇ ನಾಮಪತ್ರದ ಜತೆ ಠೇವಣಿಯಾಗಿ ಸಲ್ಲಿಸಿದ್ದಾರೆ. 10 ಸಾವಿರ ರೂಪಾಯಿಯಷ್ಟು ನಾಣ್ಯಗಳನ್ನು ತಂದು ಶಂಕರೇಗೌಡರು ನಾಮಪತ್ರದ ಜತೆ ಸಲ್ಲಿಸಿದರು. 10 ಸಾವಿರ ರೂಪಾಯಿ ಮೌಲ್ಯದ ಐದು ರೂ. ನಾಣ್ಯಗಳನ್ನು ಸ್ವೀಕರಿಸಿದ ಚುನಾವಣಾಧಿಕಾರಿ ಬಳಿಕ ಇದನ್ನು ನೋಟುಗಳಾಗಿ ಪರಿವರ್ತಿಸಿಕೊಂಡರು.

ಜೆಡಿಎಸ್‌ನಿಂದ ಶಂಕರೇಗೌಡರು ನಾಮಪತ್ರ ಸಲ್ಲಿಸುತ್ತಾರೆ ಎಂಬ ವದಂತಿ ಇತ್ತು. ಆದರೆ ಜೆಡಿಎಸ್‌ನಿಂದ ಟಿಕೆಟ್‌ ಸಿಗದ ಕಾರಣ ಶಂಕರೇಗೌಡರು ಬಿಜೆಪಿಯ ಕಡೆ ಮುಖ ಮಾಡಿದ್ದಾರೆ ಎಂಬು ಗುಸುಗುಸು ಕೂಡ ಕೇಳಿಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಶಂಕರೇಗೌಡರು ನಾಮಪತ್ರ ಸಲ್ಲಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com