ರಾಜ್ಯದ ಬಿಜೆಪಿ ನಾಯಕರಿಗೆ ಸ್ವಂತ ಶಕ್ತಿ ಇಲ್ಲ, ದೆಹಲಿಯವರನ್ನೇ ನಂಬಿಕೊಂಡಿದ್ದಾರೆ : ಪರಮೇಶ್ವರ್‌

ಕೊರಟಗೆರೆ : ರಾಜ್ಯದ ಬಿಜೆಪಿ ನಾಯಕರು ರಾಷ್ಟ್ರ ನಾಯಕರನ್ನ ಅವಲಂಬಿಸಿದ್ದು, ಇವರಿಗೆ ಶಕ್ತಿಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಲೇವಡಿ ಮಾಡಿದ್ದಾರೆ.

ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ನಾಯಕರ ಕುರಿತು ಲೇವಡಿ‌ ಮಾಡಿದ್ದಾರೆ. ಬಿಜೆಪಿಯ ಹಾಗೆ ನಾವು ರಾಷ್ಟ್ರನಾಯಕರನ್ನು ಅವಲಂಬಿಸಿಲ್ಲ. ರಾಹುಲ್ ಗಾಂಧಿ ನಮ್ಮ ರಾಷ್ರ್ಟಾಧ್ಯಕ್ಷ ಆಗಿರೋದ್ರಿಂದ ಬಂದು ಹೋಗುತ್ತಾರೆ.‌ ನಮ್ಮಲ್ಲೇ ಸಮರ್ಥ ನಾಯಕರಿದ್ದಾರೆ ಎಂದು ಹೇಳಿದ್ದಾರೆ.  ನಾನು‌ ಯಾವತ್ತು ಎರಡು ಕಡೆ ಸ್ಪರ್ಧೆ‌ ಮಾಡ್ತೀನಿ ಅಂತಾ ಹೇಳಿಲ್ಲ, ಕೊರಟಗೆರೆ ಬಿಟ್ಟು ನಾನೆಲ್ಲೂ ನಿಲ್ಲೋದಾಗಿ ಹೇಳಿಲ್ಲ ಎಂದು ವೇಳೆ ಸ್ಪಷ್ಟಪಡಿಸಿದರು‌. ರಾಜ್ಯದ ಸಿಎಂಗೆ ಆಭಾಗದ ಮುಖಂಡರು ಬಂದು ಬಾದಾಮಿಯಲ್ಲಿ ಸ್ಪರ್ಧಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ, ಅದಕ್ಕೆ ಸ್ಪಂದಿಸಿ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com