ನನ್ನ ಬಗ್ಗೆ ಮಾತಾಡಿದ್ರೆ ಜನ ನಿಂಗೆ ಚಪ್ಪಲಿಲಿ ಹೊಡೀತಾರೆ : ಅನ್ಸಾರಿ ವಿರುದ್ಧ JDS ಅಭ್ಯರ್ಥಿ ಗರಂ

ಕೊಪ್ಪಳ : ಪ್ರಚಾರದ ಭರಾಟೆಯಲ್ಲಿ ನನ್ನ ವಿರುದ್ದ ಮಾತಾಡಿದ್ರೆ ಜನ ನಿನಗೆ ಚಪ್ಪಲಿಯಲ್ಲಿ ಹೊಡೆದು ಕಳಿಸುತ್ತಾರೆ ಎಂದು ಶಾಸಕ ಇಕ್ಬಾಲ್‌ ಅನ್ಸಾರಿಗೆ ಜೆಡಿಎಸ್‌ ಅಭ್ಯರ್ಥಿ ಕರಿಯಣ್ಣ ಸಂಗಟಿ ಎಚ್ಚರಿಸಿದ್ದಾರೆ.

ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಇಕ್ಬಾಲ್‌ ಅನ್ಸಾರಿ, ಕಳೆದ ಎರಡು ದಿನದ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಗಂಗಾವತಿಯ ಜೆಡಿಎಸ್‌ ಅಭ್ಯರ್ಥಿ ಕರಿಯಣ್ಣ ಸಂಗಟಿ ವಿರುದ್ದ ವಾಗ್ದಾಳಿ ನಡೆಸಿದ್ದರು. ಕರಿಯಣ್ಣ ಒಬ್ಬ ಅಮಾಯಕ, ಪಕ್ಷಕ್ಕೆ ಬಲಿಯಾಗೋಕೆ ಅಂತಲೇ ಬಂದಿದ್ದಾನೆ ಎಂದು ಲೇವಡಿ ಮಾಡಿದ್ದರು. ಇಕ್ಬಾಲ್‌ ಅನ್ಸಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕರಿಯಣ್ಣ ಇನ್ನೊಂದು ಸಲ ನನ್ನ ಬಗ್ಗೆ ಈ ರೀತಿ ಮಾತನಾಡಿದರೆ ಕ್ಷೇತ್ರದ ಜನರೇ ನಿನಗೆ ಬುದ್ದಿ ಕಲಿಸುತ್ತಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

 

 

One thought on “ನನ್ನ ಬಗ್ಗೆ ಮಾತಾಡಿದ್ರೆ ಜನ ನಿಂಗೆ ಚಪ್ಪಲಿಲಿ ಹೊಡೀತಾರೆ : ಅನ್ಸಾರಿ ವಿರುದ್ಧ JDS ಅಭ್ಯರ್ಥಿ ಗರಂ

 • April 23, 2018 at 1:22 PM
  Permalink

  Hi there! Tһiiѕ blog рost could not be wrіtten ɑnny better!
  Going through this post remindѕ me of my pгevious roommate!
  He cⲟntіnually kept talking about this. I am going to send this information to him.
  Fairly certain hе will haգve a very good read. Thаnk you forr sharing! http://www.nhxunfa.com/comment/html/?157549.html

  Reply

Leave a Reply

Your email address will not be published.

Social Media Auto Publish Powered By : XYZScripts.com