ಮಾಡೆಲ್‌ನ ಸ್ಕರ್ಟ್‌ ಎಳೆದ ಕಾಮುಕರು ಆಮೇಲೆ ಇಂಥಾ ಪದ ಬಳಸಿದ್ರು !

ಇಂದೋರ್‌ : ಸ್ಕರ್ಟ್‌ ಧರಿಸಿ ಆಕ್ಟೀವಾದಲ್ಲಿ ಹೋಗುತ್ತಿದ್ದ ಮಾಡೆಲ್ ಒಬ್ಬರ ಮೇಲೆ ಕಾಮುಕರು ನಡು ರಸ್ತೆಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ನಡೆದಿದೆ. ಈ ಕುರಿತು ರೂಪದರ್ಶಿ ಟ್ವೀಟ್ ಮಾಡಿದ್ದಾರೆ.

ನಾನು ಸ್ಕರ್ಟ್‌ ಧರಿಸಿ ಆಕ್ಟೀವಾದಲ್ಲಿ ಹೋಗುತ್ತಿದ್ದ ವೇಳೆ ಇಬ್ಬರು ಯುವಕರು ನನ್ನ ಸ್ಕರ್ಟ್‌ ಎಳೆಯಲು ಮುಂದಾದರು, ಇದರ ಕೆಳಗೆ ಏನಿದೆ ತೋರಿಸು ಎಂದರು. ಈ ವೇಳೆ ನಾನು ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬಿದ್ದು, ಗಾಯಗೊಂಡಿರುವುದಾಗಿ ಹೇಳಿದ್ದಾರೆ.

ಆದರೆ ಈ ವೇಳೆ ಯಾರೊಬ್ಬರೂ ಇದನ್ನು ಪ್ರಶ್ನೆ ಮಾಡಲಿಲ್ಲ. ನಾನು ಬಿದ್ದ ಕೂಡಲೆ ಇಬ್ಬರೂ ಸ್ಥಳದಿಂದ ಪರಾರಿಯಾದರು. ಕೂಡಲೆ ವೃದ್ದರೊಬ್ಬರು ನಮ್ಮ ಸಹಾಯಕ್ಕೆ ಬಂದು, ನೀನು ಸ್ಕರ್ಟ್‌ ಧರಿಸಿದ್ದರ್ರೆ ಹೀಗೆ ಮಾಡಿದ್ದಾರೆ ಎಂದರು , ಇದರಿಂದ ನನಗೆ ಸಿಟ್ಟು ಬಂತು ಎಂದು ಬರೆದುಕೊಂಡಿದ್ದಾರೆ.

ಈ ರೀತಿಯ ಘಟನೆಗಳಾದಾಗ ಹುಡುಗಿಯರು ಮಾತನಾಡುವುದಿಲ್ಲ.  ಆದರೆ ನಾವು ಏನು ಬೇಕಾದರೂ ಮಾಡಿ ತಪ್ಪಿಸಿಕೊಳ್ಳಬಹುದು ಎಂಬ ಹುಡುಗರಿಗೆ ಪಾಠ ಕಲಿಸಲು ಹುಡುಗಿಯರು ಮಾತನಾಡಬೇಕು ಎಂದಿದ್ದು, ತಮ್ಮ ಕಾಲಿಗೆ ಗಾಯವಾಗಿರುವ ಫೋಟೋವನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com