ಅಡ್ಜೆಸ್ಟ್ ಮಾಡ್ಕೋ ಎಂದ ನಿರ್ಮಾಪಕನ ಜನ್ಮ ಜಾಲಾಡಿದ ಕನ್ನಡದ ನಟಿ !

ಇತ್ತೀಚೆಗಷ್ಟೇ ತೆಲುಗು ನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ಬಗ್ಗೆ ಅರೆನಗ್ನವಾಗಿ ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದರು. ಅದಾದ ಬಳಿಕ ಕನ್ನಡದ ನಟಿ ಖುಷಿ ಶೆಟ್ಟಿ ಮತ್ತೆ  ಕಾಲಿವುಡ್‌ನ ಕಾಸ್ಟಿಂಗ್‌ ಕೌಚ್‌ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ.

ಅವಕಾಶ ಬೇಕೆಂದರೆ ನಿರ್ಮಾಪಕರ ಜೊತೆ ಅಡ್ಜೆಸ್ಟ್‌ ಮಾಡಿಕೊಳ್ಳಬೇಕೆಂಬ ಸಂಸ್ಕೃತಿ ತಮಿಳಿನಲ್ಲೂ ಇದೆ. ಕನ್ಮಳು ಚಿತ್ರದಲ್ಲಿ ನಟಿಸಲು ನೀನು ನಿರ್ಮಾಪಕರ ಜೊತೆ ಸಹಕಾರ ಮಾಡಬೇಕು ಎಂದು ನನಗೂ ಹೇಳಿದ್ದರು. ಅದಕ್ಕೆ ನಾನು ಇನ್ನೊಂದು ಸಲ ಅಡ್ಜೆಸ್ಟ್ ಮಾಡ್ಕೋ, ಕಮಿಟ್‌ಮೆಂಟ್‌ ಮಾಡ್ಕೋ ಎಂದು ಏನಾದರೂ ಮೆಸೇಜ್‌ ಮಾಡಿದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ. ಒಮ್ಮೆ ಹೊಡೆದರೆ ಕರ್ನಾಟಕ ಬಿಟ್ಟು ತಮಿಳುನಾಡಿಗೆ ಹೋಗಿ ಬಿದ್ದಿರಬೇಕು. ನಿಮ್ಮ ಅಕ್ಕ ತಂಗಿಗೂ ಹೀಗೆ ಕೇಳ್ತೀರಾ ? ನಿಮ್ಮಂತಹವರು ಇರುವುದರಿಂದಲೇ ನಮ್ಮ ಚಿತ್ರರಂಗದ ಹೆಸರು ಹಾಳಾಗುತ್ತಿರುವುದು. ಸಿನಿಮಾದಲ್ಲಿ ಅವಕಾಶ ಸಿಗದಿದ್ದರೂ ಹೇಗೆ ಬದುಕಬೇಕೆಂದು ನನ್ನ ಪೋಷಕರು ನನಗೆ ಹೇಳಿಕೊಟ್ಟಿದ್ದಾರೆ. ಕಣ್ಣಿಗೆ ಕಾಣಿಸದಂತೆ ಕರ್ನಾಟಕ ಬಿಟ್ಟು ತೊಲಗಿ ಎಂದು ವ್ಯಕ್ತಿಯೊಬ್ಬರಿಗೆ ಬೈದಿರುವ ವಾಟ್ಸಪ್ ಮೆಸೇಜ್‌ನ ಸ್ಕ್ರೀನ್ ಶಾಟ್ ತೆಗೆದು, ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ನಂತರ ಆ ಪೋಸ್ಟನ್ನು ಅವರು ಡಿಲೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com