ಗೌರಿ ಹತ್ಯೆ ಪ್ರಕರಣ : SIT ಗೇ ಶಾಕ್‌ ನೀಡಿದ ಆರೋಪ ಹೊಟ್ಟೆ ಮಂಜ

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತ ಆರೋಪಿಯಾಗಿರುವ ನವೀನ್ ಅಲಿಯಾಸ್ ಹೊಟ್ಟೆ ಮಂಜ, ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದಾನೆ.

ವಿಚಾರಣೆ ವೇಳೆ ನವೀನ್, ನಾನು ಯಾವುದೇ ಮಂಪರು ಪರೀಕ್ಷೆಗೂ ಸಿದ್ಧ ಎಂದು ಕೋರ್ಟ್ ಮುಂದೆ ಒಪ್ಪಿಗೆ ನೀಡಿದ್ದನು. ಈ ಹಿನ್ನೆಲೆಯಲ್ಲಿ ಎಸ್ಐಟಿ ಪೊಲೀಸರು ಮಂಪರು ಪರೀಕ್ಷೆಗೆ ಎಲ್ಲ ಸಿದ್ಧತೆ ನಡೆಸಿ, ಕಳೆದ 16 ರಂದು ಅಹಮದಬಾದ್‌ಗೆ ಕರೆದುಕೊಂಡು ಹೋಗಿದ್ದರು.ಅ ಹಮದಾಬಾದ್ ತಲುಪಿದ ಹೊಟ್ಟೆ ಮಂಜ, ಎಸ್ಐಟಿ ಪೊಲೀಸರ ಮುಂದೆ ಮತ್ತೆ ಹೈಡ್ರಾಮಾ ಶುರುಮಾಡಿದ್ದು, ಪೊಲೀಸರ ಒತ್ತಾಯಕ್ಕೆ ಮಣಿದು ನಾನು ಮಂಪರು ಪರೀಕ್ಷೆಗೆ ಒಪ್ಪಿದ್ದೆನೇ ಹೊರತು ಸ್ವಇಚ್ಛೆಯಿಂದ ಒಪ್ಪಿಗೆ ನೀಡಿರಲಿಲ್ಲ ಎಂದು ಕ್ಯಾತೆ ತೆಗೆದಿದ್ದಾನೆ.

4 thoughts on “ಗೌರಿ ಹತ್ಯೆ ಪ್ರಕರಣ : SIT ಗೇ ಶಾಕ್‌ ನೀಡಿದ ಆರೋಪ ಹೊಟ್ಟೆ ಮಂಜ

Leave a Reply

Your email address will not be published.