ದೇವೇಗೌಡ್ರು ನನ್ನ ವಿರುದ್ಧ ನಿಲ್ಲಿಸಿರೋ ಪೈಲ್ವಾನ ಈ ಹಿಂದೆ ನನ್ನೆದುರೇ ಸೋತಿದ್ದ : ಜಮೀರ್‌ ಅಹ್ಮದ್‌

ತುಮಕೂರು : ಚಾಮರಾಜಪೇಟೆಲಿ ಬಿಕೆ ಅಲ್ತಾಫ್ ಎಂಬ ಅಭ್ಯರ್ಥಿಯನ್ನ ನನ್ನ ವಿರುದ್ದ ನಿಲ್ಲಿಸಿದ್ದಾರೆ.  ಅಲ್ತಾಫ್ ನನಗೆ ಹೊಸಬರಲ್ಲ, 2008 ರಲ್ಲಿ ನನ್ನ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.  ದೇವೇಗೌಡ್ರು ಪೈಲ್ವಾನ್ ಕರ್ಕೊಂಡು ಬಂದಿದ್ದೀನಿ ಅಂತಾರೆ , ಅದೇ ಪೈಲ್ವಾನ್ ನನ್ನ ವಿರುದ್ದ ನಿಂತು ಸೋತಿದ್ದ ಎಂದು ಜಮೀರ್ ಅಹಮದ್‌ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿಲ್ಲ, ರಾಜ್ಯದಲ್ಲಿ ಪ್ರಚಾರ ಮಾಡ್ತಿದ್ದೀನಿ. ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡೋ ಅಗತ್ಯ ನನಗಿಲ್ಲ. ನನ್ನ ಕ್ಷೇತ್ರದ ಜನರು ಇಲ್ಲಿ ಬರ್ಬೇಡಿ ರಾಜ್ಯ ಪ್ರವಾಸ ಮಾಡಿ ಅಂತಾರೆ. ಓವೈಸಿಯವರು ಎಲ್ಲಿಯೂ ಜೆಡಿಎಸ್ ಗೆ ಬೆಂಬಲ ನೀಡೋದಾಗಿ ಹೇಳಿಲ್ಲ. ಅವರು ಬೆಂಬಲ ಕೊಟ್ಟಮೇಲೆ ನಾನು ಮಾತನಾಡ್ತೀನಿ.  ಕೊರಟಗೆರೆಯಲ್ಲಿ ಪರಮೇಶ್ವರ್ ಪರ ಪ್ರಚಾರ ಮಾಡ್ತೀನಿ. ಜನರ ಒತ್ತಾಯಕ್ಕೆ ಮಣಿದು ಸಿಎಂ ಬಾದಾಮಿ ಕ್ಷೇತ್ರಕ್ಕೆ ಹೋಗ್ತಿದ್ದಾರೆ, ಸೋಲುವ ಭೀತಿಯಿಂದಲ್ಲ. ಸಿಎಂ ಸಿದ್ದರಾಮಯ್ಯ ಹುಲಿ ಇದ್ದಂತೆ ಎಂದಿದ್ದಾರೆ.

ನಾನೂ ಕೂಡ ಚಾಮರಾಜಪೇಟೆ ಕ್ಷೇತ್ರ ಸಿಎಂ ಗೆ ಬಿಟ್ಟುಕೊಡ್ತೀನಿ , 80 ಸಾವಿರ ಲೀಡಿಂಗ್ ನಲ್ಲಿ ಗೆಲ್ಲಿಸ್ತೀನಿ ಅಂತ ಹೇಳಿದ್ದೆ. ಆದ್ರೆ ಸಿಎಂ ಒಪ್ಪಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಯಾರಿಂದ ಅಂತಾ ಕರ್ನಾಟಕಕ್ಕೆ ಗೊತ್ತು. ಆದ್ರೆ ಕುಮಾರಸ್ವಾಮಿ ಮಾತ್ರ ನಾನು ಯಾವ ಸ್ನೇಹಿತರಿಂದಾಗಲಿ, ಎಂಎಲ್ಎ ಗಳಿಂದಾಗಿ ರಾಜ್ಯದ ಜನರಿಂದಾಗಲಿ ಸಿಎಂ ಆಗ್ಲಿಲ್ಲ ಅಂತಾರೆ. ದೇವರು ನನ್ನ ಹಣೆಬರಹದಲ್ಲಿ ಬರೆದಿದ್ದ ಅದಕ್ಕೆ ಮುಖ್ಯಮಂತ್ರಿ ಆದೆ ಅಂತಾರಲ್ಲ. ಅವರ ಹಣೆಬರಹ ದೇವರು ಬರೀತಾನೆ , ನನ್ನ ಹಣೆಬರಹ ಕುಮಾರಸ್ವಾಮಿ, ದೇವೇಗೌಡ ಬರೀತಾರಾ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com