WATCH: ಭಾರತೀಯ ಯೋಧರೆದುರೇ ತೊಡೆತಟ್ಟಿದ ಪಾಕ್ ಕ್ರಿಕೆಟರ್‌ : ಗಡಿಯಲ್ಲಿ ಹಸನ್‌ ಹುಚ್ಚಾಟ

ದೆಹಲಿ : ಸಾಮಾನ್ಯವಾಗಿ ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಯೋಧರು ಧ್ವಜವಂದನೆ ನಡೆಸುವುದು ಸಂಪ್ರದಾಯ. ಆದರೆ ಧ್ವಜವಂದನೆ ನಡೆಸುವ ವೇಳೆ ಪಾಕಿಸ್ತಾನದ ಕ್ರಿಕೆಟರ್‌ ಹಸನ್‌ ಅಲಿ ಅಗೌರವದಿಂದ ನಡೆದುಕೊಂಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಪಾಕಿಸ್ತಾನ ಕ್ರಿಕೆಟ್‌ ತಂಡದ ಆಟಗಾರರು ವಾಘಾ ಗಡಿಯಲ್ಲಿ  ಧ್ವಜ ವಂದನೆ ಕಾರ್ಯಕ್ರಮ ನೋಡಲು ಹಾಜರಾಗಿದ್ದರು. ಈ ವೇಳೆ  ಭಾರತೀಯ ಗಡಿ ಭದ್ರತಾ ಪಡೆ ಧ್ವಜ ವಂದನೆ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಮಧ್ಯ ಪ್ರವೇಶಿಸದ ಹಸನ್‌ ಅಲಿ ಭಾರತೀಯ ಯೋಧರ ಕಡೆ ಮುಖ ಮಾಡಿ ಯೋಧರಂತೆ ತೊಡೆ ತಟ್ಟಿ ಅಬ್ಬರಿಸಿದ್ದಾನೆ. ಈ ವೇಳೆ ಪಾಕ್‌ ಸೈನಿಕರೂ ಆತನನ್ನು ತಡೆಯದೆ ಸುಮ್ಮನೆ ನಿಂತಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಅಲ್ಲದೆ ಹಸನ್‌ ನಡೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ಅನೇಕರು ಟೀಕಾ ಪ್ರಹಾರ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com